.
ಕಲಬುರಗಿ: ಕಲಬುರಗಿಯಲ್ಲಿ ವಾಸವಾಗಿರುವ ಆಳಂದ ತಾಲೂಕಿನ ಮತದಾರರು ಹಾಗೂ ಕಾರ್ಯಕರ್ತರಿಂದ ಆಳಂದ ಶಾಸಕ ಬಿ.ಆರ್.ಪಾಟೀಲ್ ಅಭಿನಂದನಾ ಸಮಾರಂಭ ಜು.೧೬ ರಂದು ಬೆಳಗ್ಗೆ ೧೦.೩೦ ಗಂಟೆಗೆ ನಗರದ ಆಳಂದ ರಸ್ತೆಯಲ್ಲಿರುವ ವಿಶ್ವಾರಾಧ್ಯ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ. ಅಧ್ಯಕ್ಷತೆ ಡಾ.ಅಪ್ಪಾಸಾಬ ದೇಶಮುಖ ವಹಿಸುವರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಕನೀಜ್ ಫಾತಿಮಾ ಇತರರು ಪಾಲ್ಗೊಳ್ಳುವರು.