ದಾವಣಗೆರೆ: ಇಲ್ಲಿನ ದಂತವೈದ್ಯ ವಿಜ್ಞಾನ ಕಾಲೇಜಿನ ವತಿಯಿಂದ ಮಂಗಳವಾರ ಆಯೋಜಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಶ್ವ ವಿದ್ಯಾನಿಲಯದ ಬೆಳಗಾಂ ವಲಯದ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಕಾಲೇಜಿನ ನಿರ್ದೇಶಕಿ ಡಾ. ವಸುಂಧರಾ ಶಿವಣ್ಣ ಚಾಲನೆ ನೀಡಿದರು.
ರಾಜೀವ್ ಗಾಂಧಿ ಆರೋಗ್ಯ ವಿವಿಯು ಪಠ್ಯ ಅಲ್ಲದೇ ಪಠ್ಯೇತರ ಚಟುವಟಿಕೆಗಳಿಗೂ ಕೂಡ ಪ್ರಾಮುಖ್ಯತೆ ನೀಡುತ್ತಾ ಬಂದಿದೆ. ಇವು ಮಾನಸಿಕವಲ್ಲದೇ, ದೈಹಿಕ ಬೆಳವಣಿಗೆಗೂ ಅನುಕೂಲ ಕಲ್ಪಿಸಲಿದೆ ಎಂದು ಹೇಳಿದರು.
ಕಾಲೇಜಿನ ಪ್ರಾಚಾರ್ಯ ಡಾ.ಐ.ಎಂ.ಅಲಿ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ವಿಷ್ಣು, ಕೆಎನ್. ಗೋಪಾಲಕೃಷ್ಣ, ತೀರ್ಪುಗಾರರಾದ ದರ್ಶನ್ ಹಾಗೂ ಪಂದ್ಯಾವಳಿಯ ಆಯೋಜಕ ಕಾರ್ಯದರ್ಶಿ ಸಿ.ಪಿ. ಮಹೇಶ್ ಇದ್ದರು.
ಡಾ॥ ವಸುಂಧರಾ ಶಿವಣ್ಣರವರು ಬಾಸ್ಕೆಟ್ ಬಾಲ್‌ನ್ನು ಶೂಟ್ ಮಾಡುವ ಮೂಲಕ ಪಂದ್ಯಾವಳಿಗೆ ಚಾಲನೆ ನೀಡಿದರು