ಮೈಸೂರು: ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಡಿ.30 ರಿಂದ 4ರವರೆಗೆ ನಡೆಯಲಿರುವ 2021-22ನೇ ಸಾಲಿನ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಪುರುಷರ ಬಾಸ್ಕೆಟ್ ಬಾಲ್ ಪಂದ್ಯಾವಳಿಗೆ ಮೈಸೂರು ವಿವಿ ತಂಡವನ್ನು ಆಯ್ಕೆ ಮಾಡಲಾಗಿದೆ.
ವಿವಿಯ ದೈಹಿಕ ಶಿಕ್ಷಣ ವಿಭಾಗದ ವತಿಯಿಂದ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ಇತ್ತೀಚೆಗೆ ತಂಡದ ಆಯ್ಕೆ ಪ್ರಕ್ರಿಯೆ ನಡೆದಿದೆ.
ಪಿಜಿಎಸ್‌ಇ ಮಾನಸಗಂಗೋತ್ರಿಯ ಎಂ.ಸಿದ್ದೇಶ್(ನಾಯಕ), ಮೈಕಾ ಕಾಲೇಜಿನ ಧವನ್ ಎಸ್.ಬೋಜ, ಶಕ್ತಿ ಪ್ರಸಾದ್, ಟಾಮ್ಲಿನ್ ಸ್ಟಿಫಿ, ಕಬೀರ್ ಖಾನ್, ಮಂಡ್ಯ ಪಿಇಎಸ್ ಕಾಲೇಜಿನ ದರ್ಶನ್ ಗೌಡ, ಸುದೀಪ್, ಸೇಪಿಯಂಟ್ ಕಾಲೇಜಿನ ಆರ್.ವಿಜಯಕುಮಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ತರಬೇತುದಾರ ಜಿ.ಶಿವಕುಮಾರ್, ವ್ಯವಸ್ಥಾಪಕ ಪುನೀತ್ ಜತೆ ತಮ್ಮ ಯೋಗ ತಂಡ ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಬೆಳೆಸಿದೆ ಎಂದು ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಪಿ.ಕೃಷ್ಣಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.