ಬಾವಿಗೆ ಬಿದಿದ್ದ ಬೆಕ್ಕುನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ಸಿಬ್ಬಂದಿ
ವಿಜಯವಾಣಿ ಸುದ್ದಿಜಾಲ ಚಿಕ್ಕೋಡಿ
ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದ ಬೆಕ್ಕನು ಅಗ್ನಿಶಾಮಕ ದಳದ ಸಿಬ್ಬಂದಿ ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಕ್ಕನು ಸುರಕ್ಷಿತವಾಗಿ ರಕ್ಷಣೆ ಮಾಡಿರುವ ಘಟನೆ ತಾಲೂಕಿನ ನಾಗರಮುನ್ನೋಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ನಾಗರಮುನ್ನೋಳಿ ಗ್ರಾಮದ ಅಂಬೇಡ್ಕರ್ ನಗರದ ನಿವಾಸಿ ಸುನೀಲ ಗಿಜನ್ನವರ ಅವರ ಸುಮಾರ 80 ಅಡಿ ಆಳದ ತೆರೆದ ಬಾವಿಯಲ್ಲಿ ಸಾಕಿದ ಬೆಕ್ಕು ಆಕಸ್ಮಿಕವಾಗಿ ಬಾವಿಗೆ ಬಿದಿತ್ತು. ಈ ಕುರಿತು ಚಿಕ್ಕೋಡಿ ಅಗ್ನಿ ಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಸಿಬ್ಬಂದಿ ಸತತ ಎರಡು ಗಂಟೆಗಳ ಕಾಲ ಬಾವಿಯಲ್ಲಿ ಇಳಿದು ಕಾರ್ಯಾಚರಣೆ ನಡೆಸಿ ಬೆಕ್ಕನು ಸುರಕ್ಷಿತವಾಗಿ ಹೊರ ತೆಗೆದು ರಕ್ಷಣೆ ಮಾಡಿದ್ದಾರೆ.
ಠಾಣಾ ಅಧಿಕಾರಿ ಅನುರಾಗ ಬಿ.ಎಲ್, ಸಿಬ್ಬಂದಿಗಳಾದ ಟಿ.ಬಿ ಪರೀಟಿ, ಎಂ.ಎಸ್ ನದಾಪ್, ಮಲ್ಲಿಕಾರ್ಜುನ ಕುಂಬಾರ, ಅಣ್ಣಾ ಸಾಹೇಬ ಜೈನಾಪುರೆ, ಅಕ್ಷಯ ಅರಗೆ, ಬಸವರಾಜ ಸದಲಗೆ ಇತರರಿದ್ದರು.