ಕಲಬುರಗಿ: ತವರೂರಿನಲ್ಲಿ ಇದ್ದ ಪತ್ನಿಯನ್ನು ಮನೆಗೆ ಕಳುಹಿಸಿ ಎಂದು ಕರೆದ ಪತಿಯನ್ನು, ಪತ್ನಿಯ ಸಹೋದರನೇ ಚಾಕುವಿನಿಂದ ಇರಿದು ಕೊಲೆ ಮಾಡಿದ ಟನೆ ನಡೆದಿದೆ. ನಗರದ ಗಾಜಿಪುರ ನಿವಾಸಿ ಆನಂದ ಹಲ್ಲೆಗೊಳಗಾಗಿ, ಮೃತಪಟ್ಟವ. ಮೃತನ ಪತ್ನಿಯ ಸಹೋದರ ಟೋನಿ ನಾಟೀಕಾರ ಕೊಲೆಗೈದವ.
ಎರಡು ರ‍್ಷದ ಹಿಂದೆ ಆನಂದನೂ ಸ್ನೇಹಾಳ ಜತೆ ವಿವಾಹ ಆಗಿದ್ದ. ಕಳೆದ ಎರಡು ತಿಂಗಳ ಹಿಂದೆ ಜಗಳವಾಗಿ ಸ್ನೇಹಾಳು ಕುವೆಂಪು ನಗರದಲ್ಲಿನ ತವರು ಮನೆಗೆ ಬಂದಿದ್ದಳು. ಮೃತ ಆನಂದನ ಸಹೋದರನ ಮದುವೆ ನಿಶ್ಚಯವಾಗಿದ್ದರಿಂದ ಪತ್ನಿಯನ್ನು ಮನೆಗೆ ಬರುವಂತೆ ಆನಂದ ಕರೆದಿದ್ದ.
ಸಹೋದರಿಯನ್ನು ಮನೆಗೆ ಕರೆದಿದ್ದಕ್ಕೆ ಸಿಟ್ಟಾಗಿದ್ದ ಟೋನಿ ನಾಟಿಕಾರನು ಇಬ್ಬರು ಸ್ನೇಹಿತರ ಜತೆ ಸೇರಿ ಆನಂದನನ್ನು ೋನ್ ಮಾಡಿ ಕರೆಸಿ, ಏ.೧೧ರಂದು ರಾತ್ರಿ ೧೦ರ ಸುಮಾರಿಗೆ ಚಾಕುವಿನಿಂದ ಹಲ್ಲೆ ಮಾಡಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಆನಂದನನ್ನು ನಗರದ ಜಿಮ್ಸ್ ಆಸ್ಪತ್ರೆಯ ಟ್ರಾಮಾ ಕೇರ್ ಸೆಂಟರ್ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಲಕಾರಿ ಆಗದೇ ಶನಿವಾರ ಬೆಳಗ್ಗೆ ಮೃತಪಟ್ಟಿದ್ದಾನೆ. ಈ ಕುರಿತು ಪ್ರಮುಖ ಆರೋಪಿ ಟೋಮಿ ನಾಟಿಕಾರ್ ಸೇರಿ ೧೦ ಜನರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.