ಬಾಳೆಹೊನ್ನೂರಿನ ರಂಭಾಪುರಿ ಪೀಠದಲ್ಲಿ ಬುಧವಾರ ಮಳೆ ಆರಂಭಗೊಳ್ಳುವ ಮುನ್ನ ಮೋಡ ಕವಿದ ವಾತಾವರಣ ಕಂಡುಬಂದಿದ್ದು ಹೀಗೆ. 
ಜಿಲ್ಲೆ

ಬಾಳೆಹೊನ್ನೂರಲ್ಲಿ ವರ್ಷಧಾರೆ

ಬಾಳೆಹೊನ್ನೂರು: ಪಟ್ಟಣ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬುಧವಾರವೂ ಮಳೆ ಅಬ್ಬರ ಮುಂದುವರಿಯಿತು.

ಮಧ್ಯಾಹ್ನ 2.30ರ ವೇಳೆಗೆ ಗುಡುಗು, ಗಾಳಿ ಸಹಿತ ಆರಂಭಗೊಂಡ ಧಾರಾಕಾರ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿಯಿತು. ಧಾರಾಕಾರ ಮಳೆಗೆ ಮುಖ್ಯರಸ್ತೆಗಳಲ್ಲಿ ಹಳ್ಳದಂತೆ ನೀರು ಹರಿಯಿತು. ವಾಹನ ಸವಾರರು ಸಂಚರಿಸಲು ಪ್ರಯಾಸ ಪಡಬೇಕಾಯಿತು. ಮಳೆ ದಿನ ಕಳೆದಂತೆ ಹೆಚ್ಚಾಗುತ್ತಿರುವುದು ರೈತರು, ಬೆಳೆಗಾರರನ್ನು ಆತಂಕಕ್ಕೀಡುಮಾಡಿದೆ.