ನಾಪೋಕ್ಲು ಚೆರಿಯಪರಂಬು ಜನರಲ್ ಕೆ.ಎಸ್.ತಿಮ್ಮಯ್ಯ ಕ್ರಿಡಾಂಗಣದಲ್ಲಿ ನಡೆಯುತ್ತಿರುವ 21ನೇ ವರ್ಷದ ಕೊಡವ ಕೌಟುಂಬಿಕ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆಯ ಪಂದ್ಯಾಟದಲ್ಲಿ ಮುಕ್ಕಾಟಿರ (ಕಡಗದಾಳು ) ತಂಡಕ್ಕೆ ಬಾಲೆಯಡ ಕಪ್ ಸ್ಮರದಿಕೆ ಬಾಳೆಯಡ ಕ್ರಿಕೆಟ್ ನಮ್ಮೆ ಸಮಿತಿ ಅಧ್ಯಕ್ಷ ಒಲಂಪಿಯನ್, ಲೆಫ್ಟಿನೆಂಟ್ ಕರ್ನಲ್ ಬಾಳೆಯಡ ಸುಬ್ರಮಣಿ ನೀಡಿ ಗೌರವಿಸಿದರು. 
ಜಿಲ್ಲೆ

ಬಾಳೆಯಡ ಕಪ್ ಕ್ರಿಕೆಟ್ ಪಂದ್ಯಾವಳಿ

ನಾಪೋಕ್ಲು: ಇಲ್ಲಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾಳೆಯಡ ಕಪ್ ಕ್ರಿಕೆಟ್ ನಮ್ಮೆ ಯ ಭಾನುವಾರದ ಪಂದ್ಯಗಳಲ್ಲಿ ಆರು ತಂಡಗಳು ಮುನ್ನಡೆ ಸಾಧಿಸಿದವು.

ಮೊದಲ ಪಂದ್ಯದಲ್ಲಿ ಕೊಟ್ಟಂಗಡ ತಂಡದ ವಿರುದ್ಧ ಕರೋಟಿರ ತಂಡವು ಸ್ಪರ್ಧಿಸಿತು. ಕರೋಟಿರ ತಂಡವು ಎರಡು ವಿಕೆಟ್ ನಷ್ಟಕ್ಕೆ 55 ರನ್ ಗಳಿಸಿತು. ಉತ್ತರವಾಗಿ ಆಡಿದ ಕೊಟ್ಟಂಗಡ ತಂಡ ಐದು ವಿಕೆಟ್ ನಷ್ಟಕ್ಕೆ 49 ರನ್ ಗಳಿಸಿ ಸೋಲು ಅನುಭವಿಸಿತು.

ಮುಂದಿನ ಪಂದ್ಯದಲ್ಲಿ ಮುಕ್ಕಾಟಿರ (ಕಡಗದಾಳು) ತಂಡದ ವಿರುದ್ಧ ಬಲ್ಲಚಂಡಡ ಸ್ಪರ್ಧಿಸಿತು. ಬಲ್ಲಚಂಡ ಮೂರು ವಿಕೆಟ್ ನಷ್ಟಕ್ಕೆ 74 ರನ್ ಗಳಿಸಿತು. ಉತ್ತರವಾಗಿ ಆಡಿದ ಮುಕ್ಕಾಟಿರ (ಕಡಗದಾಳು) ತಂಡ ಆರು ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿತು. ಈ ಪಂದ್ಯದಲ್ಲಿ ಬಲ್ಲಚಂಡ ತಂಡ ವಿಜಯ ಸಾಧಿಸಿತು. ತಾಚಮಂಡ ತಂಡದ ವಿರುದ್ಧ ಚಕ್ಕೆರ ತಂಡ ಎರಡು ವಿಕೆಟ್ ನಷ್ಟಕ್ಕೆ 91ರನ್ ಗಳಿಸಿತು. ತಾಚಮಂಡ ತಂಡ ಐದು ವಿಕೆಟ್ ನಷ್ಟಕ್ಕೆ ಕೇವಲ 35 ರನ್ ಗಳಿಸಲಷ್ಟೇ ಶಕ್ತವಾಯಿತು. ಮುಂದಿನ ಪಂದ್ಯದಲ್ಲಿ ಬೊಜ್ಜಂಗಡ ವಿರುದ್ಧ ಅಲ್ಲಂಗಡ ಎಂಟು ವಿಕೆಟ್ ನಷ್ಟಕ್ಕೆ 36 ರನ್ ಗಳಿಸಿತು. ಉತ್ತರವಾಗಿ ಆಡಿದ ಬೊಜ್ಜಂಗಡ ತಂಡ ಏಳು ವಿಕೆಟ್ ನಷ್ಟಕ್ಕೆ 38 ರನ್ ಗಳಿಸಿ ಗೆಲುವು ಸಾಧಿಸಿತು. ಕಳಕಂಡ ತಂಡವು ಒಂದು ವಿಕೆಟ್ ನಷ್ಟಕ್ಕೆ 45 ರನ್ ಗಳಿಸಿತು, ಕರಿನೆರವಂಡ ತಂಡ 5 ವಿಕೆಟ್ ನಷ್ಟಕ್ಕೆ 42 ರನ್ ಗಳಿಸಿ ಸೋಲನ್ನು ಅನುಭವಿಸಿತು. ಕುಲ್ಲೇಟಿರ ತಂಡ 3 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತು. ಉತ್ತರವಾಗಿ ಆಡಿದ ಕುಂಡ್ಯೋಳಂಡ ತಂಡ ನಾಲ್ಕು ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿತು. ಈ ಪಂದ್ಯದಲ್ಲಿ ಕುಲ್ಲೇಟಿರ ಮುಂದಿನ ಸುತ್ತು ಪ್ರವೇಶಿಸಿತು.