ಜಿಲ್ಲೆ

ಬಾಳಿಲ ರಕ್ತಚಂದನ ದಾಸ್ತಾನು ಪತ್ತೆ ಚಿಕ್ಕಮಗಳೂರು ಅರಣ್ಯಾಧಿಕಾರಿಗಳ ದಾಳಿ

ಮಂಗಳೂರು: ಸುಳ್ಯ ತಾಲೂಕಿನ ಬಾಳಿಲದ ಮನೆಯೊಂದರಲ್ಲಿ ಅಕ್ರಮ ದಾಸ್ತಾನು ಇಡಲಾಗಿದ್ದ ಅಪಾರ ಮೌಲ್ಯದ ರಕ್ತಚಂದನವನ್ನು ಚಿಕ್ಕಮಗಳೂರು ಅರಣ್ಯಾಧಿಕಾರಿಗಳು ಪತ್ತೆ ಮಾಡಿದ್ದಾರೆ.

ಇಲ್ಲಿನ ಅಬ್ದುಲ್ಲಾ ಎಂಬವರ ಮನೆಯಲ್ಲಿ ರಕ್ತಚಂದನ ಅಕ್ರಮ ದಾಸ್ತಾನು ಇಡಲಾಗಿತ್ತು. ಅದನ್ನು ಅರಣ್ಯಾಧಿಕಾರಿಗಳು ವಶಕ್ಕೆ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.