ಜಿಲ್ಲೆ

ಬಾಳಾಜಿ ಗ್ರಾಮದಲ್ಲಿ ಮೊಸಳೆ ಪತ್ತೆ

Kodagu


ಗೋಣಿಕೊಪ್ಪ: ಬಾಳಾಜಿ ಗ್ರಾಮದಲ್ಲಿ ಶನಿವಾರ ಮೊಸಳೆ ಪತ್ತೆಯಾಗಿದೆ. ಗ್ರಾಮದ ಆಂಡಮಾಡ ಹರೀಶ್ ಎಂಬುವರ ತೋಟದ ಸಮೀಪ ಮೊಸಳೆ ಕಾಣಿಸಿಕೊಂಡಿದೆ.

ಸ್ಥಳೀಯರು ಭಯಗೊಂಡಿದ್ದಾರೆ. ಲಕ್ಷ್ಮಣತೀರ್ಥ ನದಿಗೆ ಸೇರುವ ಕೀರೆಹೊಳೆ ಮೂಲಕ ಬಂದಿರಬಹುದು ಎಂದು ಅಂದಾಜಿಸಲಾಗಿದೆ. ತಿತಿಮತಿ ವಲಯ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ಮೊಸಳೆ ಹಿಡಿಯಲು ಮುಂದಾಗಿದ್ದಾರೆ.