ಜಿಲ್ಲೆ

ಬಾಲ್ಯದಿಂದಲೇ ದೇಶಪ್ರೇಮ ಬೆಳೆಸಿಕೊಳ್ಳಿ

Chikkamagaluru

ಎನ್.ಆರ್.ಪುರ: ಮಕ್ಕಳು ಬಾಲ್ಯದಿಂದಲೇ ದೇಶಪ್ರೇಮ ಮೈಗೂಡಿಸಿಕೊಳ್ಳಬೇಕು ಎಂದು ಸಿಂಹನಗದ್ದೆ ಬಸ್ತಿಮಠದ ಶ್ರೀ ಲಕ್ಷ್ಮೀಸೇನ ಭಟ್ಟಾರಕ ಸ್ವಾಮೀಜಿ ಕರೆ ನೀಡಿದರು.

ಬಸ್ತಿಮಠದ ಜ್ವಾಲಾಮಾಲಿನಿ ದೇವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೋಮವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ನಮ್ಮ ಜವಬ್ದಾರಿ, ಹಕ್ಕು ಹಾಗೂ ಕರ್ತವ್ಯಗಳ ಕುರಿತು ತಿಳಿದುಕೊಳ್ಳಬೇಕು. ಸೈನಿಕರು ಪ್ರಾಣದ ಹಂಗು ತೊರೆದು ಹಗಲಿರಳು ಗಡಿ ಕಾಯುತ್ತಾರೆ. ಅದರಂತೆ ದೇಶ ಕಾಯುವ ಅವಕಾಶ ಸಿಗದಿದ್ದರೂ ಸಣ್ಣ, ಸಣ್ಣ ಸೇವೆಗಳನ್ನು ಸಲ್ಲಿಸುವ ಮೂಲಕ ದೇಶಪ್ರೇಮ ಮರೆಯಬೇಕು ಎಂದು ಕಿವಿಮಾತು ಹೇಳಿದರು.