ಸಾಗರದ ಇನ್ನರ್‌ವೀಲ್ ಕ್ಲಬ್ ನೂತನ ಅಧ್ಯಕ್ಷೆ ರಾಜೇಶ್ವರಿ ಅಂಕದ ಅಕಾರ ವಹಿಸಿಕೊಂಡರು. ಸ್ನೇಹಲತಾ ವಿನಯ್, ಪ್ರವೀಣಾ ವೆಂಕಟರಾವ್, ಶಶಿಕಲಾ ಅಶ್ವತ್ಥ್‌ನಾರಾಯಣ, ಉಷಾ ರಮಣ ಇತರರಿದ್ದರು. 
ಜಿಲ್ಲೆ

ಬಾಲ್ಯ ವಿವಾಹ ಭವಿಷ್ಯಕ್ಕೆ ಮಾರಕ

ಸಾಗರ: ಸರ್ಕಾರಿ ವ್ಯವಸ್ಥೆಗೆ ಪೂರಕವಾಗಿ ವಿವಿಧ ಸಂಘ ಸಂಸ್ಥೆಗಳು ಕೆಲಸ ಮಾಡುವಂತಾಗಬೇಕು. ಎಲ್ಲವನ್ನೂ ಸರ್ಕಾರವೇ ನಿರ್ವಹಿಸಲು ಸಾಧ್ಯವಿಲ್ಲ. ಜನತೆಯ ಸಹಕಾರ ಅಗತ್ಯ ಎಂದು ಉಪ ವಿಭಾಗಾಕಾರಿ ವೀರೇಶ್‌ಕುಮಾರ್ ಹೇಳಿದರು. ಸಾಗರದ ರೋಟರಿ ಭವನದಲ್ಲಿ ಶನಿವಾರ ಇನ್ನರ್‌ವೀಲ್ ಕ್ಲಬ್‌ನ ನೂತನ ಪದಾಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದ ಅವರು, ಸಮನ್ವಯದಿಂದ ಜನರಿಗೆ ಸೇವೆಗಳನ್ನು ತಲುಪಿಸಬಹುದು ಎಂದರು. ಜಿಲ್ಲೆಯಲ್ಲಿ ಜನರಿಗೆ ಸಾಕ್ಷರತೆ, ಮೂಲ ಸೌಲಭ್ಯಗಳು ದೊರಕಿವೆ. ಆದರೆ ಅತಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ನಡೆಯುತ್ತಿವೆ. ಇದು ಹೆಣ್ಣು ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ. ಮಹಿಳೆಯರಿಗೆ ಕ್ಯಾನ್ಸರ್ ಮತ್ತಿತರ ಆರೋಗ್ಯ ಸಮಸ್ಯೆ, ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ಕಾಣುತ್ತೇವೆ ಎಂದು ಕಳವಳ ವ್ಯಕ್ತಪಡಿಸಿದರು. ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ಮಹಿಳೆಯರು ವಿವಿಧ ಸಂಘ ಸಂಸ್ಥೆಗಳ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿದ್ದಾರೆ. ಇಂದು ಮಹಿಳೆಯರು ಎಲ್ಲ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯಿಂದ ರಾಷ್ಟಪತಿವರೆಗೆ ಮಹಿಳೆಯರು ಅಕಾರ ಸ್ಥಾನದಲ್ಲಿದ್ದಾರೆ ಎಂದರು. ಇನ್ನರ್‌ವೀಲ್ ಕ್ಲಬ್ ನೂತನ ಅಧ್ಯಕ್ಷೆ ರಾಜೇಶ್ವರಿ ಅಂಕದ ಮಾತನಾಡಿ, ಸಾಗರದಲ್ಲಿ ಜಿಲ್ಲಾ ಮಟ್ಟದ ಸಮಾವೇಶವನ್ನು ಸೆಪ್ಟೆಂಬರ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಇದರಲ್ಲಿ ಸುಮಾರು 55 ಕ್ಲಬ್‌ಗಳ 800 ಸದಸ್ಯರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ತಾಳಗುಪ್ಪದ ಭಾವನಾ ಅವರಿಗೆ ಸಂಸ್ಥೆಯಿಂದ 10 ಸಾವಿರ ರೂ. ವೌಲ್ಯದ ವೈದ್ಯಕೀಯ ತಪಾಸಣಾ ಉಪಕರಣಗಳನ್ನು ಕೊಡುಗೆ ನೀಡಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಇನ್ನರ್‌ವೀಲ್ ಕ್ಲಬ್ ನೂತನ ಕಾರ್ಯದರ್ಶಿ ಸ್ನೇಹಲತಾ ವಿನಯ್, ಖಜಾಂಚಿ ಪ್ರವೀಣಾ ವೆಂಕಟರಾವ್ ಅಕಾರ ಸ್ವೀಕರಿಸಿದರು. ಸಮಾವೇಶದ ಸಂಚಾಲಕಿ ಶಶಿಕಲಾ ಅಶ್ವತ್ಥ್ ನಾರಾಯಣ ಅವರು ಜಿಲ್ಲಾ ಸಮಾವೇಶದ ಕುರಿತು ಮಾಹಿತಿ ನೀಡಿದರು. ಉಷಾ ರಮಣ, ಭವಾನಿ ಪುಟ್ಟಪ್ಪ , ಶ್ವೇತಾ ಸಂದೇಶ ಇತರರಿದ್ದರು.

ಸೇವೆಯೇ ಧ್ಯೇಯವಾಗಿಟ್ಟುಕೊಂಡಿರುವ ಸಂಸ್ಥೆಗಳಲ್ಲಿ ನಾವು ಸೇವಾ ಮನೋಭಾವದಿಂದ ಕೆಲಸ ಮಾಡಬೇಕು. ಸ್ನೇಹ, ಪ್ರೀತಿ, ನಂಬಿಕೆಯಿಟ್ಟು ಒಂದು ಸಂಸ್ಥೆಯನ್ನು ಎತ್ತರಕ್ಕೆ ಬೆಳೆಸಬಹುದು. ಈ ಸಂಸ್ಥೆ ಉನ್ನತ ವೌಲ್ಯವನ್ನು ಹೊಂದಿದೆ. ನಮ್ಮ ಯೋಜನೆಗಳು ಸರಿಯಾಗಿದ್ದರೆ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಲು ಸಾಧ್ಯ. ಮುಂಬರುವ ದಿನಗಳಲ್ಲಿ ನಮ್ಮ ಸಂಸ್ಥೆ ಮಾದರಿಯಾಗಿ ಕೆಲಸ ಮಾಡುವ ಚಿಂತನೆ ಹೊಂದಿದೆ. ರಾಜೇಶ್ವರಿ ಅಂಕದ, ಇನ್ನರ್‌ವೀಲ್ ಕ್ಲಬ್ ತಾಲೂಕು ನೂತನ ಅಧ್ಯಕ್ಷೆ