ಚಿಕ್ಕೋಡಿ: ಬಾಲ್ಯ ವಿವಾಹದಿಂದ ವ್ಯಕ್ತಿಯ ದೈಹಿಕ, ಮಾನಸಿಕ ಮತ್ತು ಕುಂಟುಬದ ಮೇಲಾಗುವ ದುಷ್ಪರಿಣಾಮಗಳ ಬಗ್ಗೆ ಅರಿತುಕೊಳ್ಳುವ ಮೂಲಕ ಬಾಲ್ಯ ವಿವಾಹ ತಡೆಗೆ ಕೈಜೋಡಿಸಬೇಕು ಎಂದು ವಕೀಲೆ ಸುಪ್ರಿಯಾ ಪಾಟೀಲ ಹೇಳಿದರು.
ತಾಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪಪೂ ಮಹಾವಿದ್ಯಾಲಯದಲ್ಲಿ ಎನ್‌ಎಸ್‌ಎಸ್ ಘಟಕದ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ (ಪೋಕ್ಸೋ) 2012 ಮತ್ತು ಬಾಲ್ಯ ವಿವಾಹ ನಿಷೇಧ ಕಾಯ್ದೆ (2016) ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಾಲ್ಯ ವಿವಾಹದಲ್ಲಿ ಭಾಗವಹಿಸಿದವರೆಲ್ಲ ದಂಡನೆ ಮತ್ತು ಶಿಕ್ಷೆಗೆ ಒಳಗಾಗಬೇಕಾಗುತ್ತದೆ ಎಂದು ತಿಳಿಸಿದರು.
ಪ್ರಾಚಾರ್ಯ ಆನಂದ ಕೋಳಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಹನಮಂತ ಟಕ್ಕನ್ನವರ, ಎಸ್.ಎಸ್.ವಂಟಮೂತ್ತೆ, ಸುಭಾಷ ನಾಗರಾಳೆ, ಸತೀಶ ಯಶವಂತ, ಅಜಿತ ಬಸ್ಸರಗಿ, ಸಾಗರ ಹೆಬ್ಬಾಳೆ, ಪ್ರಶಾಂತ ವಾಲಿಕಾರ, ಸೃಷ್ಟಿ ಕುದುರೆ, ಸುಹಾಸಿನಿ ಸನದಿ, ಮಯೂರಿ ಪಾಟೀಲ ಇತರರಿದ್ದರು.