ಹುಲಸೂರು ತಾಲೂಕಿನ ಮುಚಳಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಗುರುವಾರ ರಾಜ್ಯ ಮಕ್ಕಳ ಹಕ್ಕುಗಳ ರP್ಷÀಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಭೇಟಿ ನೀಡಿ ಮಕ್ಕಳನ್ನು ಮಾತನಾಡಿಸಿದರು. ತಾಪಂ ಇಒ ವೈಜಣ್ಣ ಫುಲೆ, ಬಿಇಒ ಸಿದ್ದಿ ವೀರಯ್ಯ ರುದನೂರ ಇತರರಿದ್ದರು. 
ಜಿಲ್ಲೆ

ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರ ಅಗತ್ಯ

ಹುಲಸೂರು: ಪಾಲಕರು ಹಾಗೂ ಸಾರ್ವಜನಿಕರು ಮಕ್ಕಳ ಹಕ್ಕುಗಳ ಸಂರP್ಷÀಣೆ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದ್ದು, ಬಾಲ್ಯ ವಿವಾಹ ತಡೆಗೆ ಎಲ್ಲರ ಸಹಕಾರಬೇಕು ಎಂದು ರಾಜ್ಯ ಮಕ್ಕಳ ಹಕ್ಕುಗಳ ರP್ಷÀಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಗುರುವಾರ ನಡೆದ ಮಕ್ಕಳ ಸಂರP್ಷÀಣೆ ವಿಷಯಗಳ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯP್ಷÀತೆ ವಹಿಸಿ ಮಾತನಾಡಿದ ಅವರು, ತಾಲೂಕಿನ ಬಹುತೇಕ ಶಾಲೆಗಳಲ್ಲಿ ಮಕ್ಕಳ ಹಕ್ಕುಗಳ ರP್ಷÀಣೆ ಬಗ್ಗೆ ತಿಳುವಳಿಕೆ ಮೂಡಿಸದೆ ಕಾಲಹರಣ ಮಾಡುತ್ತಿರುವುದು ಕಂಡು ಬರುತ್ತಿದೆ. ಮಕ್ಕಳಿಗೆ ಸಿಗಬೇಕಾದ ಅಗತ್ಯ ಸೌಲಭ್ಯಗಳನ್ನು ಸಿಗುತ್ತಿಲ್ಲ. ಮಕ್ಕಳ ಹಕ್ಕು ಯಾರು ಕಸಿದುಕೊಳ್ಳುವ ಪ್ರಯತ್ನ ಮಾಡಬೇಡಿ ತಾಕೀತು ಮಾಡಿದರು.

ಸಭೆಗೂ ಮುನ್ನ ಪಟ್ಟಣದ ಹಾಲಹಳ್ಳಿ ಮುಖ್ಯರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಾರಿ ಮ್ಯಾಟ್ರಿಕ್ ಪೂರ್ವ ಬಾಲಕಿಯರ ಹಾಗೂ ಬಾಲಕರ ವಸತಿ ನಿಲಯಕ್ಕೆ ಭೇಟಿ ನೀಡಿ ಹಾಜರಾತಿ ಪುಸ್ತಕ ಪರಿಶೀಲಿಸಿ ತಪ್ಪಾಗಿರುವ ಮಾಹಿತಿಯನ್ನು ಸರಿಪಡಿಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಪೊಲೀಸ್ ವಸತಿ ನಿಲಯದ ಮುಂಭಾಗದ ಬಡಾವಣೆಯಲ್ಲಿ ನೂತನ ಅಂಗನವಾಡಿ ನಿರ್ಮಿಸಲು ಕೆಲಸ ಪ್ರಾರಂಭಿಸಿದ್ದು, ಸ್ಥಳೀಯರೊಬ್ಬರು ವಿನಾಕಾರಣ ತೊಂದರೆ ಕೊಡುತ್ತಿz್ದÁರೆ ಎನ್ನುವ ದೂರಿನ ಮೇರೆಗೆ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳ ಸಹಾಯ ಪಡೆದು ಕಟ್ಟಡವನ್ನು ಆದಷ್ಟು ಬೇಗನೆ ನಿರ್ಮಿಸಬೇಕೆÀಂದು ಇಒ ವೈಜಣ್ಣ ಫುಲೆ ಅವರಿಗೆ ಸೂಚನೆ ನೀಡಿದರು.

ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, ಅಪೌಷ್ಟಿಕತೆ ಇರುವ ಮಕ್ಕಳ ವಾರ್ಡ್ ಏಕೆ ನಿರ್ಮಿಸಿಲ್ಲ. ಶುದ್ಧವಾದ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ಆದಷ್ಟು ಬೇಗನೆ ವಿವಿಧ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಸ್ಥಳದಲ್ಲಿದ್ದ ವೈದ್ಯಾಧಿಕಾರಿಗಳಿಗೆ ತಾಕೀತು ಮಾಡಿದರು.
ಮುಚಳಂಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಹಾಜರಾತಿ ಮಾಡದೇ ಇರುವುದಕ್ಕೆ ಎಲ್ಲ ಶಿP್ಷÀಕರಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಬೇಕು ಎಂದು ಕ್ಷೇತ್ರ ಶಿP್ಷÀಣಾಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕಿನ ಗೋರ್ಟಾ (ಬಿ) ಗ್ರಾಮದ ಗ್ರಾಪಂ ಕಚೇರಿ ಅವ್ಯವಸ್ಥೆ ಕಂಡು ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡರು. ಹುಲಸೂರು ಪೊಲೀಸ್ ಠಾಣೆ , ಅಂಗನವಾಡಿ ಕೇಂದ್ರ (ಜೆ)ಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಉತ್ತಮ , ತಹಸೀಲ್ದಾರ್ ಶಿವಾನಂದ ಮೇತ್ರೆ , ತಾಪಂ ಇಒ ವೈಜಣ್ಣ ಫುಲೆ , ಕ್ಷೇತ್ರ ಶಿP್ಷÀಣಾಧಿಕಾರಿ ಶಿವರುದ್ರಯ್ಯ ರುದನೂರ, ತಾಲೂಕು ಆರೋಗ್ಯಾಧಿಕಾರಿ ಅಶೋಕ ಮೈಲಾರೆ, ಸಿಡಿಪಿಒ ಗೌತಮ ಕಾಂಬಳೆ , ಸಿಪಿಐ ಅಲಿಸಾಬ್ , ಪಿಎಸ್‌ಐ ಶಿವಪ್ಪ ಮೇಟಿ , ನಾಗರಾಜ ಮಣ್ಣೂರ, ಪಿಡಿಒ ರಮೇಶ ಮಿಲಿಂದಕರ, ಸಂದೀಪ ಬಿರಾದಾರ ಇತರರಿದ್ದರು.