ಜಿಲ್ಲೆ

ಬಾಲ್ಯ ವಿವಾಹ ಎಫ್‌ಐಆರ್ ದಾಖಲು

Chitradurga - Desk - Pranav Kumar

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗ್ರಾಮವೊಂದರ ದೇವರಾಜು ಅಪ್ರಾಪ್ತ ಬಾಲಕಿಯನ್ನು, ಬಳ್ಳಾರಿ ಹತ್ತಿರದ ಗವಿಸಿದ್ದೇಶ್ವರ ಮಠದಲ್ಲಿ ವಿವಾಹವಾದ ಹಿನ್ನಲೆಯಲ್ಲಿ ಆತನ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಬಾಲ್ಯ ವಿವಾಹ ನಡೆದಿರುವ ವಿಚಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಗಮನಕ್ಕೆ ಬಂದಿದ್ದು, ಚಳ್ಳಕೆರೆ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪರಿಶೀಲಿಸಿ ವರದಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಆ. 1ರಂದು ಪರುಶುರಾಂಪುರ ಪೊಲೀಸ್ ಠಾಣೆಯಲ್ಲಿ, ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಯೋಜನಾಧಿಕಾರಿ ಪ್ರಕರಣ ದಾಖಲಿಸಿದ್ದಾರೆ ಎಂದು ಇಲಾಖೆ ಉಪನಿರ್ದೇಶಕಿ ಭಾರತಿ ಬಣಕಾರ್ ತಿಳಿಸಿದ್ದಾರೆ.