ಜಿಲ್ಲೆ

ಬಾಲಬಿಚ್ಚಿದ ರೌಡಿ ಬಂಧನ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ನಗರದಲ್ಲಿ ಮತ್ತೆ ಬಾಲಬಿಚ್ಚಿದ ರೌಡಿ ಕಾಪೋ9ರೇಟರ್ ಚೇತನ ಹಿರೇಕೆರೂರ ಸೇರಿ ಮೂವರನ್ನು ಗೋಕುಲ ರೋಡ್ ಠಾಣೆ ಪೊಲೀಸರು ಭಾನುವಾರ ಬಂಧಿಸಿದ್ದಾರೆ.

ಯುವತಿ ವಿಚಾರಕ್ಕೆ ಸಂಬಂಧಿಸಿ ರಾಹುಲ್ ಚಂದಾವರಕರ ಮತ್ತು ಚೇತನ ಹಿರೇಕೆರೂರ ಮಧ್ಯೆ ರಾತ್ರಿ ವೇಳೆ ಪಬ್​ನಲ್ಲಿ ಗಲಾಟೆ ನಡೆದಿತ್ತು. ಬಾಟಲಿಯಿಂದ ರಾಹುಲ್ ಮೇಲೆ ಚೇತನ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿ ಹಿರೇಕೆರೂರು ಕುಟುಂಬದ ಚೇತನ, ಸಹದೇವ, ರೋಹಿತ್ ಎನ್ನುವವರನ್ನು ಬಂಧಿಸಲಾಗಿದೆ. ಪ್ರಕಾಶ ಕೆ. ಪರಾರಿಯಾಗಿದ್ದಾನೆ. ಈ ಕುರಿತು ಗೋಕುಲ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.