ಮೂಡಿಗೆರೆ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಶಾಸಕಿ ನಯನಾ ಮೋಟಮ್ಮ ಶಿಲಾನ್ಯಾಸ ನೆರವೇರಿಸಿದರು. ಕೆ.ವೆಂಕಟೇಶ್, ಹೊಸಕೆರೆ ರಮೇಶ್, ಎಂ.ಎ.ಹಂಝ, ಅಜ್ಮಲ್, ಪೂರ್ಣೇಶ್, ಮದೀಶ್, ಯಾಕೂಬ್ ಗೋಣಿಗದ್ದೆ ಇತರರಿದ್ದರು. 
ಜಿಲ್ಲೆ

ಬಾಲಕಿಯರ ಪಿಯು ಕಾಲೇಜಿಗೆ ಹೊಸ ಕಟ್ಟಡ

ಎಸ್.ಎನ್.ರವೀಂದ್ರ

ಮೂಡಿಗೆರೆ: ಪ್ರಸಕ್ತ ಬಾರಿ ಶಿಕ್ಷಣ ಇಲಾಖೆಯಿಂದ ಎಲ್ಲ ಶಾಲೆ-ಕಾಲೇಜು ನೂತನ ಕಟ್ಟಡಗಳನ್ನು ನಿರ್ಮಿಸಲು ಅನುದಾನ ಬಿಡುಗಡೆಯಾಗಿದೆ. 50 ರಿಂದ 60 ವರ್ಷದ ಬಹುತೇಕ ಕಟ್ಟಡಗಳು ಶಿಥಿಲಗೊಂಡಿವೆ. ಅಂಥ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಕಟ್ಟಡ ನಿರ್ಮಿಸಲಾಗಿದೆ ಎಂದು ಶಾಸಕಿ ನಯನಾ ಮೋಟಮ್ಮ ತಿಳಿಸಿದರು.

50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪಟ್ಟಣದ ಬಾಲಕಿಯರ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ಬುಧವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ಎಲ್ಲ ಕಡೆ ಹೊಸದಾಗಿ ಶಾಲಾ ಕಾಲೇಜು ಕಟ್ಟಡಗಳನ್ನು ನಿರ್ಮಿಸಲು ಸರ್ಕಾರ ಮುಂದಾಗಿದೆ. ಕಟ್ಟಡ ಕಾಮಗಾರಿ ಕಳಪೆಯಾಗುವಂತಿಲ್ಲ. ಮಳೆನೀರು ಸೋರಿಕೆಯಾಗದಂತೆ ಗುಣಮಟ್ಟದ ಕಟ್ಟಡ ನಿರ್ಮಾಣವಾಗಬೇಕು. ಕಳಪೆ ಕಾಮಗಾರಿಯಾಗದಂತೆ ಅಧಿಕಾರಿಗಳು ಕಟ್ಟೆಚ್ಚರ ವಹಿಸಬೇಕು ಎಂದು ಸೂಚಿಸಿದರು.

ಪಪಂ ಸದಸ್ಯರಾದ ಕೆ.ವೆಂಕಟೇಶ್, ಹೊಸಕೆರೆ ರಮೇಶ್, ಎಂ.ಎ.ಹಂಝ, ನಾಮನಿರ್ದೇಶಿತ ಸದಸ್ಯ ಅಜ್ಮಲ್, ಮಾಜಿ ಸದಸ್ಯ ಟಿ.ಎ.ಮದೀಶ್, ಪ್ರಾಚಾರ್ಯ ಪೂರ್ಣೇಶ್, ಪಿಡಬ್ಲುೃಡಿ ಎಇಇ ಚನ್ನಕೇಶವ, ನಗರ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಜೈನ್, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಯಾಕೂಬ್ ಗೋಣಿಗದ್ದೆ, ಕುನ್ನಳ್ಳಿ ರವಿ, ಗುತ್ತಿಗೆದಾರ ಸಚಿನ್ ಇತರರಿದ್ದರು.