ಕಲಬುರಗಿ: ಸೇಡಂ ತಾಲೂಕಿನ ಹೂಡಾ (ಬಿ) ಗ್ರಾಮದಲ್ಲಿ ಅಲ್ಟಾçಟೆಕ್ ಸಿಮೆಂಟ್ ಕಂಪನಿಯಿAದ ಕಲುಷಿತ ನೀರು ಸೇವಿಸಿ, ೨೦೦ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ಮೃತಪಟ್ಟ ಬಾಲಕಿ ಮಮತಾ ತಳವಾರ ಕುಟುಂಬಕ್ಕೆ ಸರ್ಕಾರ, ಕಂಪನಿ ನ್ಯಾಯ ಒದಗಿಸಿಲ್ಲ ಎಂದು ಜನತಾ ಪರಿವಾರ ಸಂಘಟನೆ ಸಂಸ್ಥಾಪಕ ಸಿರಾಜ್ ಶಾಬ್ದಿ, ಜಿಲ್ಲಾಧ್ಯಕ್ಷ ಶೇರ್‌ಅಲಿ ಆರೋಪಿಸಿದರು. ಬಾಲಕಿ ಮೃತಪಟ್ಟ ನಂತರ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಕುಟುಂಬಕ್ಕೆ ಭೇಟಿ ನೀಡಿ ಬಾಲಕಿ ತಂದೆಗೆ ೫೦ ಸಾವಿರ ರೂ. ನೀಡಿ ಕೈಬಿಟ್ಟಿದ್ದಾರೆ. ಬಾಲಕಿ ಜೀವಕ್ಕೆ ಸಚಿವರು ೫೦ ಸಾವಿರಕ್ಕೆ ನಿಗದಿ ಮಾಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಘಟನೆಗೆ ಸಂಬAಧಿಸಿದAತೆ ೨೪ಕ್ಕೂ ಹೆಚ್ಚು ಜನರು ಸಿಮೆಂಟ್ ಕಂಪನಿ, ನೀರು ಸರಬರಾಜು ವಿಭಾಗ ಮತ್ತು ಆರೋಗ್ಯ ಇಲಾಖೆ ವಿರುದ್ಧ ದೂರು ನೀಡಲಾಗಿತ್ತು. ಆದರೆ, ಪ್ರಭಾವಿಗಳು ಪ್ರಭಾವ ಬೀರಿ ದೂರನ್ನು ಹಿಂಪಡೆಯುವAತೆ ಮಾಡಿz್ದÁರೆ ಎಂದು ದೂರಿದರು. ಘಟನೆ ನಡೆದು ಹಲವು ದಿನಗಳಾದರೂ ಸರ್ಕಾರ, ತಾಲೂಕು ಆಡಳಿತ, ಕಂಪನಿಯವರು ಹೂಡಾ ಗ್ರಾಮಕ್ಕೆ ಶುದ್ಧ ನೀರಿನ ವ್ಯವಸ್ಥೆ ಮಾಡಿಲ್ಲ. ಕೂಡಲೇ ವ್ಯವಸ್ಥೆ ಮಾಡಬೇಕು. ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು. ಖಾಲೀದ್ ಅಬ್ರಾರ, ಅಝರ ಮುಬಾರಕ್, ಸೈಯ್ಯದ್ ಮುಬೀನ್ ಇದ್ದರು.