ಜಿಲ್ಲೆ

ಬಾಲಕನ ಅಪಹರಣ ರು. 22ಲಕ್ಷಕ್ಕೆ ಬೇಡಿಕೆ

ಕಲಬುರಗಿ: ನಗರದ ಗರೀಬ್ ನವಾಜ್ ಕಾಲನಿಯಲ್ಲಿ ಮಸೀದಿಗೆ ಹೋಗಿ ಬರುತ್ತೇನೆ ಎಂದು ಹೋಗಿದ್ದ ಬಾಲಕನನ್ನು ಅಪಹರಿಸಿ ೨೨ ಲಕ್ಷ ರೂ.ಗೆ ಬೇಡಿಕೆ ಇಟ್ಟಿರುವ ಘಟನೆ ನಡೆದಿದೆ. ಸೈಯದ್ ಮಕ್ತಾರ್ ಹಾಶ್ಮಿ (೧೧) ಅಪಹರಣಕ್ಕೆ ಒಳಗಾದ ಬಾಲಕ. ನ.೬ರಂದು ಮನೆಯಿಂದ ಕುಲ್ಪೇರಾ ಮಸೀದ್‌ಗೆ ಹೋಗಿ ಬರುತ್ತೇನೆ ಎಂದು ಬಾಲಕ ಹೋಗಿದ್ದು, ಬಹಳ ಹೊತ್ತಿನ ನಂತರವೂ ವಾಪಸ್ ಬಂದಿಲ್ಲ. ಈ ಬಗ್ಗೆ ನಗರದ ವಿವಿಧೆಡೆ ಹುಡುಕಾಡಿದ್ದಾರೆ. ಈ ಮಧ್ಯೆ ರಾತ್ರಿ ೯ಕ್ಕೆ ಇಂಗ್ಲಿಷ್‌ನಲ್ಲಿ ಬರೆದ ಚೀಟಿ ಮನೆಯಲ್ಲಿ ಬಿಸಾಡಿದ್ದು, ಅದರಲ್ಲಿ ೨೨ ಲಕ್ಷ ರೂ. ನೀಡಿದರೆ ಬಾಲಕನನ್ನು ಬಿಡುತ್ತೇವೆ. ಇಲ್ಲದಿದ್ದರೆ ಕಿಡ್ನಿ ಮಾರುತ್ತೇವೆ, ಇಲ್ಲವಾದರೆ ಇನ್ನೇನನ್ನೋ ಮಾಡುತ್ತೇವೆ. ಪೊಲೀಸರಿಗೆ ಹೇಳಿದರೆ ಚೆನ್ನಾಗಿರುವುದಿಲ್ಲ ಎಂದು ಉಲ್ಲೇಖಿಸಿದ್ದಾರೆ. ಆದ್ದರಿಂದ ಮಗನನ್ನು ಪತ್ತೆ ಹಚ್ಚಬೇಕು ಎಂದು ಬಾಲಕನ ತಾಯಿ ಸಮೀನಾ ಅಂಜುಮ್ ವಿಶ್ವವಿದ್ಯಾಲಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.