ಜಿಲ್ಲೆ

ಬಾಲ ಭವನ ಚಟುವಟಿಕೆಗಳು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿ

ಚಿತ್ರದುರ್ಗ: ಬಾಲ ಭವನದ ಚಟುವಟಿಕೆಗಳು ಮಕ್ಕಳ ಜ್ಞಾನಾರ್ಜನೆಗೆ ಸಹಕಾರಿಯಾಗಿವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿ ಲ್ಲಾ ನಿರೂಪಣಾಧಿಕಾರಿ ಡಿ.ಮಂಜುನಾಥ್ ಹೇಳಿದರು. ರಾಜ್ಯಬಾಲ ಭವನ ಸೊಸೈಟಿ,ಜಿಪಂ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿಯಿಂದ ನಗರದ ಸಂಪಿಗೆ ಸಿದ್ದೇಶ್ವರ ಪ್ರೌಢಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆ ಸ್ಪರ್ಧಾ ಕಾರ‌್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯಬಾಲ ಭವನ ಸೊಸೈಟಿ,ಮಕ್ಕಳಲ್ಲಿರುವ ಕ್ರಿಯಾತ್ಮಕ ಚಟು ವಟಿಕೆಗಳಿಗೆ ವೇದಿಕೆ ಕಲ್ಪಿಸಿ ಕೊಟ್ಟು ಅವರ ಓದಿಗೂ ಸಹಕಾರಿಯಾಗುತ್ತಿದೆ. ಸಮಾಜದಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಅನುಕೂಲವಾ ಗುತ್ತದೆ ಎಂದರು.

ಚಿತ್ರದುರ್ಗ ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಮಾತನಾಡಿ,ಮಕ್ಕಳು ಮೊಬೈಲ್ ಗೀಳಿನಿಂದ ಹೊರ ಬರಬೇಕು. ಉತ್ತಮ ವಿ ದ್ಯಾಭ್ಯಾಸ ಮಾಡಬೇಕೆಂದರು. ಜಿಲ್ಲಾ ಬಾಲಭವನ ಕಾರ‌್ಯಕ್ರಮ ಸಂಯೋಜಕ ಡಿ.ಶ್ರೀಕುಮಾರ್ ಮಾತನಾಡಿ,ರಾಜ್ಯಬಾಲ ಭವನ ಸೊಸೈಟಿ ಯಿಂದ ರಾಜ್ಯಾದ್ಯಂತ ಕಾರ‌್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಚಿತ್ರಕಲೆ, ಪ್ರಬಂಧ,ಆಶುಭಾಷಣ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ವಿ ಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸಹಾಯಕ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಮಂಜುಳಾ,ಶಿಕ್ಷಕ ತಿಪ್ಪೇಸ್ವಾಮಿ, ಸಿರಿ ಸಂಪಿಗೆ ಸಂಸ್ಥೆಯ ಕೆ.ಪವಿತ್ರಾ ಇದ್ದರು.