ಬಾಗಲಕೋಟೆ: ಹಿಮಾಚಲ ಪ್ರದೇಶದಿಂದ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಜಿಲ್ಲೆಯ ಮಹಾಲಿಂಗಪುರದ ಯೋಧ ಮಹೇಶ್ ಮರಿಗೊಂಡ ಅವರ ಇದ್ದ ಸೈನಿಕರ ವಾಹನ ಪ್ರಪಾತಕ್ಕೆ ಉರುಳಿ ಐವರು ಸೈನಿಕರು ಸಾವನಪ್ಪಿದ್ದು ಅವರಲ್ಲಿ ಮಹೇಶ್ ಸಹ ಹುತಾತ್ಮರಾಗಿದ್ದಾರೆ.
೨೫ ವಯಸ್ಸಿನ ಮಹೇಶ್, ಪಿಯುಸಿ ಮುಗಿಸಿ ಆರು ವರ್ಷಗಳ ಹಿಂದೆ ಭಾರತೀಯ ಸೇನೆಗೆ ಸೇರಿದ್ದ. ೬ ವರ್ಷ ೬ ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇದೀಗ ಕರ್ತವ್ಯಕ್ಕೆ ತೆರಳುವ ಮಾರ್ಗ ಮಧ್ಯದಲ್ಲಿ ವಾಹನ ಪ್ರಪಾತಕ್ಕೆ ಬಿದ್ದು ಈ ಅಪಘಾತದಲ್ಲಿ ಬದುಕಿಗೆ ವಿದಾಯ ಹೇಳಿದ್ದಾರೆ. ಇದರಿಂದ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗುವಂತಾಗಿದೆ.
ತಾಯಿ ಶಾರದಾ, ಪತ್ನಿ ಲಕ್ಷಿ÷್ಮÃ, ಓರ್ವ ಸಹೋದರ ಹಾಗೂ ಓರ್ವ ಸಹೋದರಿ ಹೊಂದಿದ್ದ ಮಹೇಶ್, ಲಕ್ಷಿ÷್ಮÃ ಎಂಬ ಯುವತಿಯನ್ನು ಮೂರು ವರ್ಷಗಳ ಹಿಂದೆ ಮದುವೆ ಆಗಿದ್ದರು. ಮನೆಗೆ ಹಿರಿಯ ಮಗನಾಗಿದ್ದ ಮಹೇಶ್, ಇದೀಗ ಇನ್ನಿಲ್ಲ ಎನ್ನುವುದನ್ನು ಅರಗಿಸಿಕೊಳ್ಳಲು ಕುಟುಂಬದಲ್ಲಿ ಸಾಧ್ಯವಾಗುತ್ತಿಲ್ಲ.
ಅಪಘಾತ ಸಂಭವಿಸುವ ಕೆಲವೆ ಗಂಟೆಗಳ ಮುಂಚೆ -ೆÇÃನ್ ಮಾಡಿ ಪತ್ನಿ ಹಾಗೂ ಸಹೋದರನ ಜೊತೆ ಯೋಧ ಮಹೇಶ್ ಮಾತನಾಡಿದ್ದರು. ಸಂಜೆ ವಾಹನ ಅಪಘಾತವಾಗಿ ಯೋಧರು ಸಾವನ್ನಪ್ಪಿದ್ದಾರೆ ಎನ್ನುವ ಸುದ್ದಿ ಮಾಧ್ಯಮಗಳಿಂದ ತಿಳಿದು ಆತಂಕದಿAದ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ತಮಗೆ ಸಾಧ್ಯವಾಗಲಿಲ್ಲ. ಬುಧವಾರ ಬೆಳಗ್ಗೆ ಮಹೇಶ್ ಜೊತೆ ಕೆಲಸ ಮಾಡುತ್ತಿದ್ದ ಅಥಣಿ ಮೂಲದ ಸ್ನೇಹಿತ ಯೋಧ ಮಹಾಲಿಂಗಪುರಕ್ಕೆ ಆಗಮಿಸಿ ಈ ಬರಸಿಡಿಲು ಬಡಿಯುವಂತ ವಿಷಯ ತಿಳಿಸಿದ ಎಂದು ಮಹೇಶ್ ಅವರ ಚಿಕ್ಕಪ್ಪ ಮಹಾಲಿಂಗಪ್ಪ ಮರಿಗೊಂಡ ಗದ್ಗಿತರಾದರು.
ಯೋಧ ಮಹೇಶ್ ಕಳೆದ ಆಗಸ್ಟ್ ತಿಂಗಳಲ್ಲಿ ರಜೆ ಪಡೆದು ಮಹಾಲಿಂಗಪುರಕ್ಕೆ ಬಂದಿದ್ದ. ರಜೆ ಮುಗಿಸಿ ಮಹಾಲಿಂಗಪುರ ಜಾತ್ರೆಯ ಮುನ್ನ ಮರಳಿ ಕರ್ತವ್ಯಕ್ಕೆ ತೆರಳಿದ್ದ. ಬಳಿಕ ಹಿಮಾಚಲ ಪ್ರದೇಶದಲ್ಲಿ ಪತ್ನಿಯನ್ನು ಕರೆಸಿಕೊಂಡು ಮೂರು ತಿಂಗಳಾಗಿತ್ತು. ಈಗ ಮತ್ತೆ ಜಮ್ಮು ಕಾಶ್ಮೀರಕ್ಕೆ ವರ್ಗಾವಣೆ ಆಗಿದ್ದರಿಂದ ಅಲ್ಲಿಗೆ ಪತ್ನಿಯನ್ನು ಕರೆದುಕೊಂಡು ಹೋಗಲು ಆಗದೇ ಲಕ್ಷಿ÷್ಮÃಯನ್ನು ವಾಪಸ್ಸು ಊರಿಗೆ ಕಳುಹಿಸಿ, ತಾನು ಅಲ್ಲಿಂದ ಜಮ್ಮು ಕಾಶ್ಮೀರಕ್ಕೆ ಹೊರಟಿದ್ದ. ಮಂಗಳವಾರ ಬೆಳಗ್ಗೆಯಷ್ಟೆ ಯೋಧನ ಪತ್ನಿ, ನಮ್ಮ ಸೊಸೆ ಊರಿಗೆ ಬಂದು ತಲುಪಿದರು. ಆದರೆ, ವಿಽ ಸಂಜೆ ಹೊತ್ತಿಗೆ ನಮ್ಮ ಮಗ ಮಹೇಶನನ್ನು ಬಾರದ ಲೋಕಕ್ಕೆ ಕರೆದುಕೊಂಡು ಹೋಗಿದೆ ಎಂದು ಚಿಕ್ಕಪ್ಪ ಮತ್ತೆ ಗದ್ಗದಿತರಾದರು. ರಸ್ತೆ ಅಪಘಾತದಲ್ಲಿ ಸಾವನ್ನಪ್ಪುವ ಮೂಲಕ ಏಳು ವರ್ಷಗಳ ಮಹಾಲಿಂಗಪುರದ ವೀರ ಸೈನಿಕನ ಭಾರತೀಯ ಸೇನೆಯ ಸೇವೆ ಅಂತ್ಯವಾಗಿದ್ದು, ಕುಟುಂಬದ ಕುಡಿಯನ್ನು ಕಳೆದುಕೊಂಡು ಕುಟುಂಬ ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ.
ಬುಧವಾರ ಮೃತ ಯೋಧನ ಮರಣೋತ್ತರ ಪರೀಕ್ಷೆ ಬಳಿಕ ಬಹುತೇಕ ರಾತ್ರಿ ಜಮ್ಮು ಕಾಶ್ಮೀರದಿಂದ ವಿಮಾನದ ಮೂಲಕ ಬೆಳಗಾವಿಗೆ ಪಾರ್ಥಿವ ಶರೀರ ಬರುವ ಸಾಧ್ಯತೆ ಇದೆ. ಗುರುವಾರ ಬೆಳಗ್ಗೆ ಬೆಳಗಾವಿಯಿಂದ ಅಲ್ಲಿನ ಸೈನಿಕರು ರಸ್ತೆ ಮಾರ್ಗವಾಗಿ ಮಹಾಲಿಂಗಪುರಕ್ಕೆ ತರುವ ನಿರೀಕ್ಷೆ ಇದೆ. ಬಳಿಕ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ನಂತರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಸAಸ್ಕಾರ ನೆರವೇರಲಿದೆ ಎಂದು ತೇರದಾಳ ಶಾಸಕ ಸಿದ್ದು ಸವದಿ ತಿಳಿಸಿದ್ದಾರೆ.
೨೫ ವರ್ಷದ ಯೋಧ ಮಹೇಶ್ ದೇಶ ಸೇವೆಯಲ್ಲಿ ವೀರಮರಣ ಹೊಂದಿದ್ದಾರೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ. ಈಗಾಗಲೇ ನಾನು ಜಮ್ಮಿ ಕಾಶ್ಮೀರದ ಸೇನಾ ಅಽಕಾರಿಗಳ ಜೊತೆ ಮಾತನಾಡಿದ್ದೇನೆ. ಬುಧವಾರ ಸಾಯಂಕಾಲದ ಹೊತ್ತಿಗೆ ಎಲ್ಲ ಪ್ರಕ್ರಿಯೆ ಮುಗಿಸಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಬರುವುದಾಗಿ ಹೇಳಿದ್ದಾರೆ. ಜೊತೆಗೆ ಇಲ್ಲಿನ ಅಽಕಾರಿಗಳಿಗೂ ಎಲ್ಲ ಸಿದ್ದತೆ ತೆಗೆದುಕೊಳ್ಳಲು ತಿಳಿಸಿದ್ದಾಗಿ ಹೇಳಿದರು.
ಸಚಿವ ತಿಮ್ಮಾಪುರ ಭೇಟಿ, ಸಾಂತ್ವಾನ :
ಯೋಧ ಮಹೇಶ್ ಸಾವಿನ ಸುದ್ದಿ ತಿಳಿದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಮಹಾಲಿಂಗಪುರಕ್ಕೆ ಭೇಟಿ ನೀಡಿ ಅಲ್ಲಿನ ದೇವಸ್ಥಾನಕ್ಕೆ ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿದರು. ಇದೇ ವೇಳೆ ಯೋಧನ ಅಜ್ಜಿ ರುಕ್ಮಾಬಾಯಿ ರೋಧನ ಮುಗಿಲು ಮುಟ್ಟಿತ್ತು. ಮಹೇಶ್ ಅಪ್ಪ ಹೋದ ಮೇಲೆ ಅವರ ಮಾವಂದಿರು ಆತನನ್ನು ಚನ್ನಾಗಿ ನೋಡಿಕೊಂಡಿದ್ದರು. ಸೇನೆಗೆ ಸೇರಿದ್ದ ಇಷ್ಟು ಚಿಕ್ಕವಯಸ್ಸಿನಲ್ಲಿ ಇಲ್ಲ ಎನ್ನುವುದು ಅರಿಸಿಕೊಳ್ಳಲು ಆಗುತ್ತಿಲ್ಲ ಎಂದು ಕಣ್ಣೀರು ಸುರಿಸಿದರು. ಈ ವೇಳೆ ಸಚಿವರು ಅಜ್ಜಿಯನ್ನು ಸಮಾಧಾನ ಪಡಿಸಿದರು. ಈ ವೇಳೆ ಯೋಧನ ಕುಟುಂಬದವರಿಗೆ ಸರ್ಕಾರಿ ನೌಕರಿ ಕೊಡೆಸುವಂತೆ ಜನರು ಮನವಿ ಮಾಡಿದರು.
ಕಾನೂನಿನಲ್ಲಿ ಏನೆಲ್ಲ ಅವಕಾಶಗಳು ಇವೆ ಅದೆಲ್ಲವನ್ನು ಒದಗಿಸಲಾಗುವುದು. ಮೃತನ ಕುಟುಂಬಕ್ಕೆ ಸರ್ಕಾರದಿಂದ ಸಿಗಬೇಕಾದ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು. ಇನ್ನು ಜಿಲ್ಲಾ ಪೊಲೀಸ್ ವರಿಷ್ಠಾಽಕಾರಿ ಅಮರನಾಥ ರೆಡ್ಡಿ ಸಹ ಮಹಾಲಿಂಗಪುರಕ್ಕೆ ಭೇಟಿ ನೀಡಿ ಯೋಧನ ಕುಟುಂಬ ಸದಸ್ಯರಿಗೆ ಸಾಂತ್ವಾನ ಹೇಳಿ ಮುಂದಿನ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಇನ್ನು ಮೃತ ಯೋಧನ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಎಲ್ಲಿ ಅವಕಾಶ ಕಲ್ಪಿಸಬೇಕು, ಅಂತ್ಯಸAಸ್ಕಾರ ಎಲ್ಲಿ ಎನ್ನುವ ಬಗ್ಗೆ ಕಟುಂಬದವರು ಹಾಗೂ ಅಽಕಾರಿಗಳು ಜೊತೆ ಚರ್ಚಿಸಿ ನಂತರ ನಿರ್ಧರಿಸಲಾಗುತ್ತಿದೆ.
ಪತ್ನಿ, ತಾಯಿಗೆ ಇನ್ನು ವಿಷಯ ತಿಳಿಸಿಲ್ಲ
ಪತ್ನಿ ಲಕ್ಷಿ÷್ಮÃ ಹಾಗೂ ತಾಯಿ ಶಾರದಾ ಅವರಿಗೆ ಯೋಧ ಅಪಘಾತದಲ್ಲಿ ಬಾರದ ಲೋಕಕ್ಕೆ ತೆರಳಿರುವ ಸುದ್ದಿಯನ್ನು ತಲುಪಿಸಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಬಂದವರೆಲ್ಲರಿಗೂ ದೇವಸ್ಥಾನದ ಬಳಿಯೇ ಅಲ್ಲಿ ಇರುವ ಇತರರ ಸದಸ್ಯರಿಗೆ ಸಾಂತ್ವಾನ ಹೇಳುವುದು ಹಾಗೂ ಇತರೆ ವಿಷಯಗಳ ಚರ್ಚೆ ನಡೆಯುತ್ತಿದೆ. ಪತಿಯನ್ನು ಬೀಳ್ಕೊಟ್ಟು ಬುಧವಾರ ಬೆಳಗ್ಗೆ ಅಷ್ಟೇ ಬಂದಿರುವ ಪತ್ನಿಗೆ ಈ ಆಘಾತ ತಡೆದುಕೊಳ್ಳುವುದು ಕಷ್ಟ ಎನ್ನುವ ಕಾರಣಕ್ಕೆ ಸದ್ಯ ವಾಹನ ಅಪಘಾತವಾಗಿದೆ ಎಂದಷ್ಟೆ ಹೇಳಿದ್ದಾರಂತೆ. ಹೀಗಾಗಿ ಯಾರು ಅವರು ಇರುವ ಮನೆಗೆ ಬುಧವಾರ ಸಂಜೆ ವರೆಗೂ ಹೋಗಿಲ್ಲ.