ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ರಾಷ್ಟಿçÃಯ ಬಾಯಿ ಆರೋಗ್ಯ ಅಭಿಯಾನದಡಿ ಅರಿವು ಕಾರ್ಯಕ್ರಮವನ್ನು ಮೆಡಿಕಲ್ ಕಾಲೇಜು ಡೀನ್ ಡಾ.ಹರೀಶ್ ಉದ್ಘಾಟಿಸಿದರು. ಡಾ.ಮೋಹನ್ ಕುಮಾರ್, ಡಾ.ಪ್ರೇಮ್‌ಕುಮಾರ್ ಮತ್ತಿತರರಿದ್ದರು. 
ಜಿಲ್ಲೆ

ಬಾಯಿ ಆರೋಗ್ಯ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯ

ಚಿಕ್ಕಮಗಳೂರು: ಬಾಯಿ ಆರೋಗ್ಯ ಉತ್ತಮವಾಗಿದ್ದರೆ ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಚಿಕ್ಕಮಗಳೂರು ಮೆಡಿಕಲ್ ಕಾಲೇಜು ಡೀನ್ ಡಾ. ಹರೀಶ್ ಅಭಿಪ್ರಾಯಪಟ್ಟರು.

ನಗರದ ಚಿಕ್ಕಮಗಳೂರು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಿಂದ ಹಾಗೂ ರಾಷ್ಟಿçÃಯ ಬಾಯಿ ಆರೋಗ್ಯ ಅಭಿಯಾನದಡಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬಿಎಸ್‌ಇ ನರ್ಸಿಂಗ್ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಲ್ಲುಗಳು ಜೀರ್ಣಕ್ರಿಯೆಯಲ್ಲಿ ಪ್ರಮುಖ ಪತ್ರ ಹೊಂದಿದ್ದು, ದೇಹದ ಆರೋಗ್ಯ ರಕ್ಷಣೆ ಕಾಪಾಡುವಲ್ಲಿ ಸಹಕಾರಿಯಾಗಿರುತ್ತದೆ. ಹಲ್ಲುಗಳು ಮಾನವನ ಮುಖದ ಸೌಂದರ್ಯ ಕಾಪಾಡುವುದರ ಜೊತೆಗೆ ಆತ್ಮ ಧೈರ್ಯವನ್ನು ಹೆಚ್ಚಿಸುತ್ತದೆ. ಹಲ್ಲುಗಳು ಇಲ್ಲದ ಸಂದರ್ಭದಲ್ಲಿ ಆತ್ಮ ಧೈರ್ಯ ಕುಗ್ಗಿ ಇತರರೊಂದಿಗೆ ಸಂಭಾಷಣೆ ನಡೆಸಲು ಆಡಚಣೆಯಾಗುತ್ತದೆ. ವಸಡಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರ ಮುಖಂತರ ಸದೃಡ ಹಲ್ಲುಗಳನ್ನು ಪಡೆಯಬಹುದು. ತಂಬಾಕು ಪದಾರ್ಥಗಳು, ಪಾನ್ ಪಾರಾಕ್ ಮುಂತಾದವುಗಳನ್ನು ಸೇವಿಸುವುದರಿಂದ ಮಾರಕ ಕ್ಯಾನ್ಸರ್ ರೋಗಕ್ಕೆ ತುತ್ತಾಗುವ ಸಂಭವ ಇರುತ್ತದೆ. ಹಾಗಾಗಿ ದುಶ್ಚಟಗಳಾದ ಧೂಮಪಾನ, ಮದ್ಯಪಾನದಿಂದ ಯುವ ಜನಾಂಗ ದೂರವಿರಬೇಕು ಎಂದು ಹೇಳಿದರು.

ಜಿಲ್ಲಾಸ್ಪತ್ರೆ ಮುಖ್ಯಸ್ಥ ಡಾ. ಮೋಹನ್ ಕುಮಾರ್ ಮಾತನಾಡಿ, ಬಾಯಿ ದೇಹದ ಹೆಬ್ಬಾಗಿಲು. ಇದನ್ನು ಸರಿಯಾಗಿಟ್ಟುಕೊಳ್ಳುವುದು ತಮ್ಮ ಜವಾಬ್ದಾರಿ. ಬಾಯಿ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿಯಮಿತವಾಗಿ ದಂತವೈದ್ಯರಿAದ ಪರೀಕ್ಷಿಸಿಕೊಳ್ಳಿ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ನೋಡಲ್ ಅಧಿಕಾರಿ ಡಾ. ಪ್ರೇಮ್ ಕುಮಾರ್ ಉಪನ್ಯಾಸ ನೀಡಿ, ಹಲ್ಲು ಹುಳುಕು ಅಥವಾ ದಂತ ಕ್ಷಯ ಆರಂಭದಲ್ಲೇ ಗುರುತಿಸಿ ದಂತ ವೈದ್ಯರಲ್ಲಿ ಚಿಕಿತ್ಸೆ ಪಡೆಯುವುದರಿಂದ ಹಲ್ಲುಗಳನ್ನು ಕಿಳಿಸಿಕೊಳ್ಳುವುದನ್ನು ತಡೆಗಟ್ಟಬಹುದು. ನಿಮ್ಮ ವಸಡುಗಳನ್ನು ಮತ್ತು ಹಲ್ಲುಗಳನ್ನು ಪ್ರತಿ ಆರು ತಿಂಗಳಿಗೊಮ್ಮೆ ಪರೀಕ್ಷಿಸಿ ಶುಚಿಗೊಳಿಸಿ. ವಸಡುಗಳಲ್ಲಿ ರಕ್ತಸ್ರಾವವಾಗುವುದನ್ನು ಮತ್ತು ಹುಳುಕಾಗದಂತೆ ದೂರವಿಡಲು ದಿನಕ್ಕೆ ಎರಡು ಬಾರಿ ಹಲ್ಲನ್ನು ಉಜ್ಜಬೇಕು. ಬಾಯಿಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಸರಿಯಾದ ಪೋಷಕಾಂಶವು ದೇಹಕ್ಕೆ ಸಿಗದೇ ದೇಹದ ಆರೋಗ್ಯ ಕುಂಠಿತಗೊಳ್ಳುತ್ತದೆ. ಬಾಯಿಯ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳದಿದ್ದರೆ ಶ್ವಾಸಕೋಶಕ್ಕೆ ಸಂಬAಧಿಸಿದ ಖಾಯಿಲೆಗಳು ಹಾಗೂ ಸಕ್ಕರೆ ಖಾಯಿಲೆ ಬರುವ ಸಂಭವವಿರುತ್ತದೆ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಬಾಯಿ ಆರೋಗ್ಯ ಕುರಿತು ಪ್ರಬಂಧ ಸ್ಪರ್ಧೆ ನಡೆಸಿ ಬಹುಮಾನ ನೀಡಲಾಯಿತು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಜಲಜಾಕ್ಷಿ, ಶುಶ್ರೂಷಾಧಿಕಾರಿ ವಲೇರಿಯನ್ ಸುದೀಪ್ ಪಿಂಟೋ ಉಪಸ್ಥಿತರಿದ್ದರು.