ಜಿಲ್ಲೆ

ಬಾಬಾ ಸಾಹೇಬ್ ಅಂಬೇಡ್ಕರ್ ಆಶಯಗಳು ಇನ್ನು ಈಡೆರುತ್ತಿಲ್ಲ; ಎಚ್.ಕೆ ಕುಮಾರಸ್ವಾಮಿ

reportermys

ಹಾಸನ: ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳು ಇನ್ನು ಈಡೆರುತ್ತಿಲ್ಲ. ಅಂಬೇಡ್ಕರ್ ಹಾಕಿ ಕೊಟ್ಟ ಶಿಕ್ಷಣ, ಸಂಘಟನೆ, ಹೋರಾಟದ ಹಾದಿ ಇನ್ನು ಆರಂಭದ ಹಂತದಲ್ಲೇ ಇದೆ ಎಂದು ಎಂದು ಶಾಸಕ ಎಚ್.ಕೆ ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 66 ನೇ ಪರಿನಿರ್ವಾಣ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಸಮಾಜ ಕಲ್ಯಾಣ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿ, ವಿಶ್ವಕ್ಕೆ ಶ್ರೇಷ್ಟ ಸಂವಿಧಾನ ಬರೆದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳನ್ನು ಅಣಕಿಸುವ ಘಟನೆಗಳು ನಡೆಯುತ್ತಿದೆ ಎಂದು ಬೇಸರ ವ್ಯಕ್ತ ಪಡಿಸಿದ ಅವರು ಜಿಲ್ಲಾಡಳಿತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿರ್ವಾಣ ದಿನವನ್ನು ಆಚರಿಸುತ್ತಿರುವುದು ಶ್ಲಾಘನೀಯ ಎಂದರು.

ವಿಶ್ವದಾದ್ಯಂತ ಪ್ರಜಾ ಪ್ರಭುತ್ವ, ಸಮಾನತೆಯನ್ನು ಪ್ರೀತಿಸುವ ಪ್ರಪಂಚದ ಎಲ್ಲರೂ ಇಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನೆನಪು ಮಾಡಿಕೊಳ್ಳುವ ದಿನವಾಗಿದೆ. ಇನ್ನೂ ತಳ ಸಮುದಾಯದ ಮೇಲೆ ನಡೆಯುತ್ತಿವೆ ಹಲ್ಲೆ ದೌರ್ಜನ್ಯ ನಡೆಯುತ್ತಿರುವುದು ಬೇಸರದ ಸಂಗತಿ, ಇದೆಲ್ಲ ಕೊನೆಯಾಗಬೇಕು ಈ ನಿಟ್ಟಿನಲ್ಲಿ ಎಲ್ಲರೂ ಅವರ ತತ್ವ ಆದರ್ಶಗಳನ್ನು ಪಾಲಿಸೋಣ ಎಂದರು.

ಜಿಲ್ಲಾಧಿಕಾರಿ ಎಂ.ಎಸ್ ಅರ್ಚನಾ ಮಾತನಾಡಿ, ಅಂಬೇಡ್ಕರ್ ನೆನೆಪು ಒಂದು ದಿನಕ್ಕೆ ಸೀಮಿತವಾಗಿರದೆ ಪ್ರತಿ ದಿನವೂ ಆಚರಿಸುವಂತೆ ಆಗಬೇಕು, ಸರ್ಕಾ ರದ ಎಲ್ಲ ಕಾರ್ಯ ಚಟುವಟಿಕೆಗಳು ಭಾರತೀಯ ಸಂವಿಧಾನದ ಅಡಿಯಲ್ಲೇ ನಡೆಯುತ್ತಿದ್ದು ಅವರ ತತ್ವ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು.ಬಾಬಾ ಸಾಹೇಬ್ ಅಂಬೇಡ್ಕರ್ ಹಾಕಿ ಕೊಟ್ಟ ಸಂವಿಧಾನ ದೇಶ ಮುಂದುವರೆಯಲು ಅಡಿಪಾಯವಗಿದೆ ಎಂದು ತಿಳಿಸಿದರು.

ದಸಂಸ ಮುಖಂಡ ಸಂದೇಶ್ ಎಚ್.ಕೆ ಮಾತನಾಡಿ, ತಳ ಸಮುದಾಯದ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಯುತ್ತಲೇ ಇವೆ, ಜಾತಿ ವ್ಯವಸ್ಥೆಯ ಕರಾಳ ದಿನಗಳು ಇಂದಿಗೂ ಮುಂದುವರೆಯುತ್ತಿರುವುದೂ ಜಾತಿ ವ್ಯವಸ್ಥೆ ಮಡುಗಟ್ಟಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಸಂವಿಧಾನ ಬದಲಿಸುವ ಮಾತುಗಳು ಕೆಲ ಜನ ಪ್ರತಿನಿಧಿಗಳಿಂದ ಕೇಳಿ ಬರುತ್ತಿದ್ದು, ಇದು ನಾಚಿಗೆಡಿನ ಸಂಗತಿ, ಯಾರು ಸಂವಿಧಾನ ಬದಲಿಸಲು ಸಾಧ್ಯವಿಲ್ಲ, ಅಂತಹ ಘಟನೆಗಳು ನಡೆದರೆ ಅದನ್ನು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನದ ಅಡಿಯಲ್ಲೇ ವಿರೋಧಿಸೂಣ ಎಂದ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅನುಭವಿಸಿದ ಜಾತಿವ್ಯವಸ್ಥೆಯ ಕಹಿ ಘಟನೆಗಳನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾರಿರಾಂ ಶಂಕರ್, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಂಜುನಾಥ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸತೀಶ್, ನಗರಸಭೆ ಅಧ್ಯಕ್ಷ ಆರ್. ಮೋಹನ್, ನಗರಸಭೆ ಆಯುಕ್ತರಾದ ಪರಮೇಶ್ವರಪ್ಪ, ಕಾಂಗ್ರೆಸ್ ಮುಖಂಡರಾದ ಬಾನವಾಸೆ ರಂಗಸ್ವಾಮಿ, ದೇವಾರಾಜೆಗೌಡ, ರಂಜಿತ್ ಗೊರೂರು, ದಸಂಸ ಮುಖಂಡರಾದ ಕೃಷ್ಣದಾಸ್, ರಾಜೇಶ್, ಮಹಾಂತಪ್ಪ, ಇತರರು ಇದ್ದರು.