ವಿಜಯಪುರ ತಾಲೂಕು ಹಡಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಪುಗೌಡ ಬಿರಾದಾರ, ಉಪಾಧ್ಯಕ್ಷೆ ಬಿನುಬಾಯಿ ರಾಠೋಡ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. 
ಜಿಲ್ಲೆ

ಬಾಪುಗೌಡ ಅಧ್ಯಕ್ಷ, ಬಿನುಬಾಯಿ ಉಪಾಧ್ಯಕ್ಷೆ

ಹಡಗಲಿ: ವಿಜಯಪುರ ತಾಲೂಕಿನ ಹಡಗಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಬಾಪುಗೌಡ ಬಿರಾದಾರ, ಉಪಾಧ್ಯಕ್ಷರಾಗಿ ಬಿನುಬಾಯಿ ರಾಠೋಡ ಅವಿರೋಧ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ಕಾರ್ಯದರ್ಶಿ ಐ.ಎಸ್. ಔರಂಗಾಬಾದ್ ಸಹಾಯಕರಾಗಿ ಪಿಡಿಒ ರಾಜೇಶ ಗಾಯಕವಾಡ, ಕಾರ್ಯದರ್ಶಿ ಎಂ.ಎಂ. ಅರವತ್ತಿ, ಗ್ರಾಮ ಲೆಕ್ಕಾಧಿಕಾರಿ ಸುನೀಲ ರಾಠೋಡ, ಗ್ರಾಮ ಪಂಚಾಯಿತಿ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಪಿಎಸ್‌ಐ ಅರವಿಂದ ಅಂಗಡಿ ಪೊಲೀಸ್ ಸಿಬ್ಬಂದಿಯೊಂದಿಗೆ ಭದ್ರತೆ ಒದಗಿಸಿದ್ದರು.

ವಿಜೇತರು ಬೆಂಬಲಿಗರು ಗ್ರಾಮದ ದೇವಸ್ಥಾನಕ್ಕೆ ಭೇಟಿ ನೀಡಿದರು. ಗ್ರಾಮದ ಹಿರಿಯರು, ಯುವಕರು, ಗ್ರಾಪಂ ಸದಸ್ಯರು ವಿಜಯೋತ್ಸವ ಆಚರಿಸಿದರು.