ಅರಸೀಕೆರೆ ಗ್ರಾಮಾಂತರ: ತಾಲೂಕಿನ ಬಾಣಾವರ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ವೀಣಾ ವಿಶ್ವನಾಥ್ ಮಾತನಾಡಿ, ಶಾಂತಿಯುತವಾಗಿ ಹೋರಾಟ ಮಾಡಿ ನಮಗೆ ಸ್ವಾತಂತ್ರ್ಯ ತಂದುಕೊಟ್ಟದ್ದು ಮಹಾತ್ಮ ಗಾಂಧೀಜಿ ಅವರು. ಅವರಂತೆ ಹಲವು ಜನರು ತಮ್ಮ ಪ್ರಾಣವನ್ನೇ ಬಲಿದಾನ ಮಾಡಿದ್ದಾರೆ ಎಂದರು.
ಪೊಲೀಸ್ ಇಲಾಖೆ, ಎನ್‌ಸಿಸಿ, ಹೋಮ್‌ಗಾರ್ಡ್, ಸ್ಕೌಟ್ಸ್ ಮತ್ತು ಗೈಡ್ಸ್, ಸೇವಾದಳದಿಂದ ಧ್ವಜವಂದನೆ ಪಥ ಸಂಚಲನ ನಡೆಯಿತು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಾರದಮ್ಮ, ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಬಿ.ಆರ್.ಜಯಣ್ಣ, ಬಿ.ಆರ್.ಲಕ್ಷ್ಮೀಶ್, ಬಿ.ಎಂ.ಜಯಣ್ಣ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಆರ್.ಶ್ರೀಧರ್, ಧರ್ಮಣ್ಣ, ಭಾಗ್ಯಮ್ಮ, ಮೊಮಿನ್, ಆಸಿಫ್, ವೀಣಾ ಸುರೇಶ್, ಸಂಜಯ್, ಗೀತಾ ಕೃಷ್ಣಮೂರ್ತಿ, ಆಶಾ ಹರೀಶ್, ಹೇಮಾ ಮಹಾಲಿಂಗರಾಜ್, ಶ್ರುತಿ ಮಂಜಪ್ಪ, ಪಿಡಿಒ ಕುಮಾರಸ್ವಾಮಿ, ಕಾರ್ಯದರ್ಶಿ ಶ್ರೀನಾಥ್, ಸರ್ಕಾರಿ ಪದವಿ ಪೂರ್ವ ಕಾಲೇಜು ಸಿಬ್ಬಂದಿ, ಶಾಲಾ ಶಿಕ್ಷಕರು ಭಾಗವಹಿಸಿದ್ದರು.