ಮಳವಳ್ಳಿ ತಾಲೂಕಿನ ಬಾಚನಹಳ್ಳಿ ಗ್ರಾಮದ ರೈತ ರೇವಣ್ಣನ ಜಮೀನಿನಲ್ಲಿದ್ದ ಹುಲ್ಲಿನ ಮೆದೆ ಮಂಗಳವಾರ ರಾತ್ರಿ ಭಸ್ಮವಾಗಿರುವುದು. 
ಜಿಲ್ಲೆ

ಬಾಚನಹಳ್ಳಿಯಲ್ಲಿ ಹುಲ್ಲಿನ ಮೆದೆ ಭಸ್ಮ

Mandya

ಮಳವಳ್ಳಿ: ತಾಲೂಕಿನ ಬಾಚನಹಳ್ಳಿ ಗ್ರಾಮ ಹೊರವಲಯದಲ್ಲಿ ಮಂಗಳವಾರ ರಾತ್ರಿ ಬೆಂಕಿ ಹೊತ್ತಿಕೊಂಡು ಹುಲ್ಲಿನ ಮೆದೆ ಭಸ್ಮವಾಗಿದೆ.


ಗ್ರಾಮದ ರೇವಣ್ಣ ಅವರ ಹುಲ್ಲಿನ ಮೆದೆ ಬೆಂಕಿಗಾಹುತಿಯಾಗಿದೆ. ಜಾನುವಾರುಗಳ ಮೇವಿಗೆಂದು ಇತ್ತೀಚೆಗೆ ಹುಲ್ಲು ಖರೀದಿಸಿ ಜಮೀನಿನ ಬಳಿ ಮೆದೆ ಹಾಕಿಸಿದ್ದರು. ಬುಧವಾರ ಬೆಳಗ್ಗೆ ಜಮೀನು ಬಳಿಗೆ ರೇವಣ್ಣ ಹೋದಾಗ ಮೆದೆ ಸಂಪೂರ್ಣ ಸುಟ್ಟು ಬೂದಿಯಾಗಿರುವುದು ಕಂಡುಬಂದಿದೆ.