ಜಿಲ್ಲೆ

ಬಾಗೇಪಲ್ಲಿ ಪುರಸಭೆ ಆಡಳಿತ ಚುಕ್ಕಾಣಿ ಕಾಂಗ್ರೆಸ್ ವಶಕ್ಕೆ

ಬಾಗೇಪಲ್ಲಿ : ತೀವ್ರ ಕುತೂಹಲ ಕೆರಳಿಸಿದ್ದ ಬಾಗೇಪಲ್ಲಿ ಪುರಸಭೆ ಆಡಳಿತ ಕಾಂಗ್ರೆಸ್ ವಶವಾಗಿದೆ. ಅಧ್ಯಕ್ಷೆಯಾಗಿ 14ನೇ ವಾರ್ಡ್‌ನ ಗುಲ್ನಾಜ್ ಬೇಗಂ ಮತ್ತು ಉಪಾಧ್ಯಕ್ಷರಾಗಿ 23ನೇ ವಾರ್ಡ್ ಎ.ಶ್ರೀನಿವಾಸ್ ಶುಕ್ರವಾರ ಅವಿರೋಧ ಆಯ್ಕೆಯಾಗಿದ್ದಾರೆ.

ಇದೇ ಮೊದಲ ಬಾರಿಗೆ ಸದಸ್ಯೆಯಾಗಿ ಆಯ್ಕೆಯಾದ ಗುಲ್ನಾಜ್ ಬೇಗಂ ಗಾದಿ ಏರಿದ್ದಾರೆ.

ಶುಕ್ರವಾರ ನಿಗದಿಯಾಗಿದ್ದ ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಗುಲ್ನಾಜ್ ಬೇಗಂ, ಉಪಾಧ್ಯಕ್ಷ ಸ್ಥಾನಕ್ಕೆ ಎ.ಶ್ರೀನಿವಾಸ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಎಂ.ನಾಗರಾಜು ಅವಿರೋಧ ಆಯ್ಕೆ ೋಷಿಸಿದರು.

ಶಾಸಕ ಎಸ್.ಎನ್.ಸುಬ್ಬಾರೆಡ್ಡಿ, ಪುರಸಭೆ ಕಾಂಗ್ರೆಸ್ ಸದಸ್ಯರಾದ ಗುಲ್ನಾಜ್ ಬೇಗಂ, ಎ.ಶ್ರೀನಿವಾಸ, ಎ.ನಂಜುಂಡ, ಅಶೋಕ್‌ರೆಡ್ಡಿ, ಶ್ರೀನಿವಾಸರೆಡ್ಡಿ, ಹಸೀನಾ, ಸುನಿತಾ, ಶಬಾನಪರ್ವಿನ್, ಜಬೀವುಲ್ಲಾ, ಶ್ರೀನಾಥ್, ಪದ್ಮ ಮಲ್ಲೇಶ್, ನಾಗರತ್ನಮ್ಮ, ಮತ್ತು ಪಕ್ಷೇತರರಾದ ಗಡ್ಡಂ ರಮೇಶ್, ರೇಷ್ಮಾಭಾನು, ನಾಸೀರ್, ಮಧುಸೂದನರೆಡ್ಡಿ ಹಾಜರಾಗಿದ್ದರು. ಉಳಿದಂತೆ ಸಂಸದ ಬಿ.ಎನ್.ಬಚ್ಚೇಗೌಡ, ಸುಜಾತಾ ನರಸಿಂಹನಾಯ್ಡು, ಎಸ್ಟಿಡಿ ಮೂರ್ತಿ, ಸರೋಜಮ್ಮ, ವನಿತಾದೇವಿ ಸೋಮಶೇಖರ್, ಅ.ನ.ಮೂರ್ತಿ, ಸುಶೀಲಮ್ಮ ಗೈರಾಗಿದ್ದರು.ಜಿಪಂ ಸದಸ್ಯ ನರಸಿಂಹಪ್ಪ, ತಾಪಂ ಅಧ್ಯಕ್ಷ ಕೆ.ಆರ್.ನರೇಂದ್ರಬಾಬು, ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ, ಮಾಜಿ ಅಧ್ಯಕ್ಷ ಜಯಪ್ರಕಾಶ್ ನಾರಾಯಣ, ಕೆಡಿಪಿ ಸದಸ್ಯ ಅಮರನಾಥರೆಡ್ಡಿ, ತಾಪಂ ಮಾಜಿ ಅಧ್ಯಕ್ಷ ಎಸ್.ಎಸ್.ರಮೇಶ್ ಬಾಬು, ಎನ್‌ಎಸ್‌ಯುಐ ಜಿಲ್ಲಾಧ್ಯಕ್ಷ ಸೋಮಶೇಖರ್, ತಾಲೂಕು ಅಧ್ಯಕ್ಷ ಕ್ರಿಕೆಟ್ ಮೂರ್ತಿ, ಮುಖಂಡರಾದ ದೇವಿಕುಂಟೆ ಆನಂದ್, ಯಲ್ಲಂಪಲ್ಲಿ ಆನಂದ್ ಇತರರಿದ್ದರು.

ಸಂಭ್ರಮಾಚರಣೆ : ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ಮುಂಜಾಗ್ರತಾ ಕ್ರಮವಾಗಿ ಸರ್ಕಲ್ ಇನ್‌ಸ್ಪೆಕ್ಟರ್ ನಯಾಜ್ ಬೇಗ್ ಮತ್ತು ಸಬ್ ಇನ್‌ಸ್ಪೆಕ್ಟರ್ ಸುನಿಲ್ ಕುಮಾರ್ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.