ಸಾಂದರ್ಭಿಕ ಚಿತ್ರ 
ಜಿಲ್ಲೆ

ಬಾಗಿಲು ಮೀಟಿ 1.30 ಲಕ್ಷ ರೂ. ದೋಚಿದ ಖದೀಮರು

ಮೈಸೂರು: ವಿಜಯನಗರದ 4ನೇ ಹಂತದಲ್ಲಿರುವ ಮನೆಯೊಂದರ ಬಾಗಿಲು ಮೀಟಿದ ಖದೀಮರು 1.30 ಲಕ್ಷ ರೂ. ನಗದು ದೋಚಿದ್ದಾರೆ.

ಮನೆ ಮಾಲೀಕ ಯಶವಂತ್ ಅವರು ಬೆಂಗಳೂರಿಗೆ ತೆರಳಿದ್ದರು. ಈ ಸಂದರ್ಭದಲ್ಲಿ ಕಳ್ಳರು ಬಾಗಿಲು ಮೀಟಿ 1.30 ಲಕ್ಷ ರೂ.ನಗದಿನೊಂದಿಗೆ 5 ಸಾವಿರ ರೂ.ಮೊತ್ತದ ಮೊಬೈಲ್, 5 ಸಾವಿರ ರೂ. ಮೌಲ್ಯದ ಬೆಳ್ಳಿ ತಟ್ಟೆಯನ್ನು ಕದ್ದಿದ್ದಾರೆ.

ವಿಜಯನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.