ಚಿತ್ರದುರ್ಗ:ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿವಿ ಸಾಗರದಲ್ಲಿ ಜ.23ರಂದು ಬಾಗಿನ ಅರ್ಪಣೆ ಕಾರ‌್ಯಕ್ರಮದಲ್ಲಿ ನಾನು ಯಾ ವುದೇ ರಾಜಕಾರಣ ಹುಡುಕುವುದಿಲ್ಲ ಎಂದು ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದ ರು.
ಮೂರನೇ ಬಾರಿಗೆ ಕೊಡಿ ಬಿದ್ದಿರುವ ವಿವಿ ಸಾಗರ ಜಲಾಶಯಕ್ಕೆ ಮಂಗಳವಾರ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಅಧಿಕಾರದಲ್ಲಿ ಇರುವವರು ಬಾಗಿನ ಅರ್ಪಿಸುವುದು ಸಹಜ. ಮೈಸೂರು ಸಂಸ್ಥಾನಕ್ಕೂ ಈ ಭಾಗಕ್ಕೂ ಅವಿನಾಭಾವ ಸಂಬಂಧವಿದೆ.
ಈ ಪ್ರದೇಶದ ಜನರಿಗೆ ನೀರು ಒದಗಿಸಲು ಹಿಂದೆ ಜಲಾಶಯ ನಿರ್ಮಿಸಲಾಗಿದೆ. ಈ ಹಿನ್ನೆಲೆಯಲ್ಲಿ ಜನರ ಆಹ್ವಾನದ ಮೇರೆಗೆ ನಾ ನಿಂದು ಬಾಗಿನ ಅರ್ಪಿಸಿ ಗಂಗಾಮಾತೆಗೆ ಕೃತಜ್ಞತೆ ಸಲ್ಲಿಸಿದ್ದೇನೆಂದು,ಸಿಎಂ ಬಾಗಿನ ಸಮರ್ಪಣೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಭಾರತ ಸಪ್ತ ಸಿಂಧೂ ನದಿಗಳ ನಾಡು,ವರುಣನ ಕೃಪೆಯಿಂದ ವಿವಿ ಸಾಗರ ಜಲಾಶಯ ಮತ್ತೆ ಭರ್ತಿಯಾಗಿದೆ ಎಂ ದರು.
ಬಿಜೆಪಿ ಒಳಜಗಳ ಕುರಿತಂತೆ ಎಲ್ಲ ಸಮಸ್ಯೆಗಳು ಪಕ್ಷದ ಚೌಕಟ್ಟು,ಒಳಗೆ ಚರ್ಚೆಯಾಗಬೇಕು. ನಾಯಕರು ಇವೆಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು. ಕುರ್ಚಿ ಕುರಿತಂತೆ ಕಾಂಗ್ರೆಸ್ಸನಲ್ಲೂ ನಡೆದಿರುವ ಚರ್ಚೆಗೆ ಪ್ರತಿಕ್ರಿಯಿಸಿದ ಸಂಸದರು,ಕುರ್ಚಿಗಳು ಕಡಿಮೆ ಆಕಾಂಕ್ಷಿಗಳು ಜಾಸ್ತಿ.
ಯಾರಿಗೆ ಸಾಮಥ್ಯ ಇರುತ್ತದೆಯೋ ಅವರಿಗೆ ಕುರ್ಚಿ ಸಿಗುತ್ತದೆ ಎಂದರು. ಭಾರತದ ಸಮಸ್ತ ಜನರನ್ನು ಹೇಗೆ ದಿಕ್ಕು ತಪ್ಪಿಸಲಾಗುತ್ತಿದೆ ಎಂಬುದನ್ನು ವಿವರಿಸುವ ಸಲುವಾಗಿ ಚಿತ್ರದುರ್ಗದಲ್ಲಿ ಸಂವಿಧಾನ ಸಮ್ಮಾನ್ ಗೌರವ ಕಾರ‌್ಯಕ್ರಮ ಆಯೋಜಿಸಿರುವ ಕಾರ‌್ಯಕ್ರಮದಲ್ಲಿ ಪಾ ಲ್ಗೊಳ್ಳುತ್ತಿರುವುದಾಗಿ ತಿಳಿಸಿದರು.