ಜಿಲ್ಲೆ

ಬಾಗಿನ ಅರ್ಪಣೆ

Chikkamagaluru

ಬಣಕಲ್: ಬಣಕಲ್, ಬಾಳೂರು, ಕೊಟ್ಟಿಗೆಹಾರ ಭಾಗದ ಮಹಿಳೆಯರು ಮಂಗಳವಾರ ಗಂಗಾಪೂಜೆ ನಡೆಸಿ ಬಾಗಿನ ಅರ್ಪಿಸಿ ಗೌರಿಹಬ್ಬ ಆಚರಿಸಿದರು. ಸುಮಂಗಲಿಯರು 16 ಸುತ್ತಿನ ಗೌರಿದಾರ ಪೂಜಿಸಿ ಕೈಗೆ ಕಟ್ಟಿಕೊಂಡರು.

ದೇವನಗೂಲ್ ಗ್ರಾಮದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ ಗೃಹಿಣಿ ಯಶೋದಮ್ಮ, ಮುತ್ತೈದೆಯರಿಗೆ ಅರಿಶಿನ, ಕುಂಕುಮ, ಹಸಿರುಬಳೆ, ಕರಿಮಣಿ ಬಾಚಣಿಗೆ, ಸೀರೆ, ಹಣ್ಣು-ಕಾಯಿ, ಧಾನ್ಯಗಳನ್ನೊಳಗೊಂಡ ಬಾಗಿನ ನೀಡುವುದರಿಂದ ದಾನ ಮಾಡುವ ಪುಣ್ಯ ಲಭಿಸುತ್ತದೆ ಎಂದರು.