ಬಾಗಲಕೋಟೆ ನಗರದ ವಿದ್ಯಾಗಿರಿಯಲ್ಲಿ ನೂತನವಾಗಿ ಬಿಟಿಡಿಎದಿಂದ ನಿರ್ಮಿಸಿದ ಬಸ್ ತಂಗುದಾಣ ಹಾಗೂ ಸುಲಭ ಶೌಚಗೃಹ ಶಾಸಕ ಎಚ್.ವೈ.ಮೇಟಿ ಮೇಟಿ ಉದ್ಘಾಟಿಸಿದರು.  
ಜಿಲ್ಲೆ

ಬಾಗಲಕೋಟೆ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ

ಬಾಗಲಕೋಟೆ: ಬಾಗಲಕೋಟೆ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದ್ದು, ಅಗತ್ಯ ಮೂಲ ಸೌಲಭ್ಯ ಒದಗಿಸುವ ಕಾರ್ಯ ನಿರಂತವಾಗಿ ನಡೆಯುತ್ತಿದೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಶಾಸಕ ಎಚ್.ವೈ.ಮೇಟಿ ಮೇಟಿ ಹೇಳಿದರು.

ನಗರದ ವಿದ್ಯಾಗಿರಿಯಲ್ಲಿ ನೂತನವಾಗಿ ಬಿಟಿಡಿಎದಿಂದ ನಿರ್ಮಿಸಿದ ಬಸ್ ತಂಗುದಾಣ ಹಾಗೂ ಸುಲಭ ಶೌಚಗೃಹ ಉದ್ಘಾಟಿಸಿ ಅವರು ಮಾತನಾಡಿದರು.
ಬಿಟಿಡಿಎದಿಂದ ೧೪.೩೭ ಲಕ್ಷ ವೆಚ್ಚದಲ್ಲಿ ಸುಲಭ ಶೌಚಾಲಯ, ೨೩.೨೦ ಲಕ್ಷ ವೆಚ್ಚದಲ್ಲಿ ಬಸ್ ತಂಗುದಾಣ ನಿರ್ಮಿಸಲಾಗಿದೆ. ಇದೊಂದು ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಇಲ್ಲಿ ನಿತ್ಯವೂ ಲಕ್ಷಾಂತರ ಜನರು ವ್ಯಾಪಾರ-ವಹಿವಾಟಿಗಾಗಿ ಬರುತ್ತಾರೆ. ಆದರೆ, ಒಂದು ಶೌಚಾಲಯ ಕೂಡ ಇರಲಿಲ್ಲ. ಮುಖ್ಯವಾಗಿ ಸಾರಿಗೆ ಸಂಸ್ಥೆಗಳ ಬಸ್‌ಗಳೂ ಸೇರಿದಂತೆ ಖಾಸಗಿ ವಾಹನ, ಟಂಟಂಗಳು ಇದೇ ಮಾರ್ಗವಾಗಿ ಸಂಚರಿಸುತ್ತವೆ. ಪ್ರಯಾಣಿಕರು ಬಸ್‌ಗಾಗಿ ಬಿಸಿಲಿನಲ್ಲೇ ನಿಂತು ಕಾಯುವ ಪರಿಸ್ಥಿತಿ ಇತ್ತು. ಇದೀಗ ಅತ್ಯಾಧುನಿಕ ಮಾದರಿಯ ಬಸ್ ತಂಗುದಾಣ ನಿರ್ಮಿಸಿದ್ದು, ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.
ನವನಗರ ಹಾಗೂ ಬಾಗಲಕೋಟೆಯ ಮಧ್ಯ ಭಾಗದಲ್ಲಿ ಇರುವ ವಿದ್ಯಾಗಿರಿ, ಪ್ರಮುಖ ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿದೆ. ಬಿಟಿಡಿಎದಿಂದ ಈ ಕೊರತೆ ನೀಗಿಸಿದ್ದು, ಪ್ರಯಾಣಿಕರು, ಸಾರ್ವಜನಿಕರು ಇದರ ಲಾಭ ಪಡೆಯಬೇಕು. ಬಸ್ ತಂಗುದಾಣ, ಸುಲಭ ಶೌಚಾಲಯ ಸ್ವಚ್ಛವಾಗಿಡಬೇಕು. ನಗರಸಭೆಯಿಂದ ಶೌಚಗೃಹ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ತಿಳಿಸಿದರು.

ಬಿಟಿಡಿಎ ಮುಖ್ಯ ಇಂಜಿನಿಯರ್ ಮನ್ಮಥಯ್ಯ ಎಂ. ಸ್ವಾಮಿ, ಕಾರ್ಯನಿರ್ವಾಹಕ ಡಿ.ಜಿ. ಕಲ್ಲೂರಮಠ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ನಾಗರಾಜ ಹದ್ಲಿ, ರಜಾಕ ಬೇನೂರ, ಎಸ್.ಎನ್.ರಾಂಪುರ, ಮುಖಂಡರಾದ ಸಿದ್ದಣ್ಣ ಗೋಡಿ, ಮುತ್ತು ಜೋಳದ, ಶಫೀಕ ಜಮಾದಾರ, ದುಂಡಪ್ಪ ಏಳೆಮ್ಮಿ, ರೇಣುಕಾ ನ್ಯಾಮಗೌಡರ, ಕಲಾವತಿ ಕಮತ, ಜಯಶ್ರೀ ಗುಳಬಾಳ ಇದ್ದರು