ಬಾಗಲಕೋಟೆ: ಭಾರತ ಚುನಾವಣಾ ಆಯೋಗ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ವೇಳಾಪಟ್ಟಿಯನ್ನು ಹೊರಡಿಸಿದ್ದು, ಬಾಗಲಕೋಟೆ ಮತಕ್ಷೇತ್ರದಲ್ಲಿ ೧೧೭೫೩೬ ಪುರುಷ, ೧೧೮೪೭೨ ಮಹಿಳಾ ಹಾಗೂ ೧೭ ಇತರೆ ಸೇರಿ ಒಟ್ಟು ೨೩೬೦೨೫ ಮತದಾರರಿದ್ದಾರೆ ಉಪವಿಭಾಗಾಧಿಕಾರಿಗಳು ಆಗಿರುವ ಬಾಗಲಕೋಟೆ ಮತಕ್ಷೇತ್ರದ ಚುನಾವಣಾಧಿಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಚುನಾವಣಾ ಮಾದರಿ ನೀತಿ ಸಂಹಿತೆ ಮಾ.೨೯ ರಿಂದ ಚುನಾವಣಾ ಪ್ರಕ್ರಿಯೆ ಮುಕ್ತಾಯವಾಗುವವರೆ ಜಾರಿಯಲ್ಲಿರುತ್ತದೆ. ಮತಕ್ಷೇತ್ರದಲ್ಲಿ ಅಳವಡಿಸಲಾದ ಬ್ಯಾನರ್, ಬಂಟಿಂಗ್ಸ್ ಗಳನ್ನು ಕೂಡಲೇ ತೆರವುಗೊಳಿಸಲು ಅಽಕಾರಿಗಳಿಗೆ ಸೂಚಿಸಲಾಗಿದೆ. ಚುನಾವಣೆ ನಡೆಸಲು ಎಲ್ಲ ರೀತಿಯಿಂದ ಸಜ್ಜಾಗಿದ್ದು, ಮಾದರಿ ನೀತಿ ಸಂಹಿತೆ ಪಾಲನೆಗೆ ೨೧ ಸೆಕ್ಟರ ಅಽಕಾರಿಗಳು, ಓರ್ವ ಸಹಾಯಕ ವೆಚ್ಚ ವೀಕ್ಷಕ, ೫ ವಿಡಿಯೋ ಕಣ್ಗಾವಲು ತಂಡ, ೧ ವಿಡಿಯೋ ವೀಕ್ಷಣಾ ತಂಡ, ೯ ಕ್ಷಿಪ್ರ ಸಂಚಾರಿ ದಳಗಳು ಹಾಗೂ ೧೨ ಸ್ಥಾಯಿ ಕಣ್ಗಾವಲು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಮತಕ್ಷೇತ್ರದಲ್ಲಿ ಹೊನ್ನಾಕಟ್ಟಿ, ಹೊಸೂರ, ನಾಯನೇಗಲಿ ಮತ್ತು ಐಬಿ ಕಮತಗಿ ಕ್ರಾಸ್‌ನಲ್ಲಿ ಚೆಕ್‌ಪೋಸ್ಟಗಳನ್ನು ತೆರೆಯಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹ ಸಿ-ವಿಜಿಲ್ ಆಪ್ ಮೊಬೈಲ್‌ನಲ್ಲಿ ಡೌನಲೋಡ್ ಮಾಡಿಕೊಂಡು ದೂರು ಸಲ್ಲಿಸಬಹುದಾಗಿದೆ. ಮತಕ್ಷೇತ್ರದಲ್ಲಿ ಒಟ್ಟು ೨೩೬೦೨೫ ಮತದಾರರಿದ್ದು, ಅದರಲ್ಲಿ ಸೇವಾ ಮತದಾರರು ೩೯೨ ಜನ ಇದ್ದಾರೆ. ಅದರಲ್ಲಿ ೩೮೭ ಪುರುಷ, ೫ ಮಹಿಳಾ ಮತದಾರರಿದ್ದಾರೆ ಎಂದರು.
ಮತಕ್ಷೇತ್ರದಲ್ಲಿ ಒಟ್ಟು ೨೬೩ ಮತಗಟ್ಟೆಗಳಿದ್ದು, ನಗರ ಪ್ರದೇಶದಲ್ಲಿ ೧೦೫, ಗ್ರಾಮೀಣ ಪ್ರದೇಶದಲ್ಲಿ ೧೫೮ ಮತಗಟ್ಟೆಗಳಿವೆ. ೯ ವಲ್ನೇಬರ್, ೫೧ ಕ್ರಿಟಿಕಲ್, ೨೦೩ ಸಾಮಾನ್ಯ ಮತಗಟ್ಟೆಗಳಿವೆ. ಪ್ರತಿ ಮತಗಟ್ಟೆಗೆ ೫ ಮತಗಟ್ಟೆ ಅಽಕಾರಿಗಳು ಒಳಗೊಂಡಂತೆ ಶೇ.೧೦ ರಷ್ಟು ಹೆಚ್ಚುವರಿ ಸೇರಿ ಒಟ್ಟು ೧೩೪೧ ಸಿಬ್ಬಂದಿಗಳು ಅವಶ್ಯಕತೆ ಇದ್ದು, ಮುಧೋಳ, ಬೀಳಗಿ, ಹುನಗುಂದ, ಬಾದಾಮಿ, ಬಾಗಲಕೋಟೆ ಹಾಗೂ ಜಮಖಂಡಿ ತಾಲೂಕುಗಳಿಂದ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಎನ್‌ಕೋರ್ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಅಥವಾ ಆಪ್‌ಲೈನ್ ಮೂಲಕ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ. ಅಭ್ಯರ್ಥಿ ಹಾಗೂ ರಾಜಕೀಯ ಪಕ್ಷದವರು ಸಭೆಗಳಿಗೆ, ರ‍್ಯಾಲಿ, ವಾಹನಗಳಿಗೆ, ತಾತ್ಕಾಲಿಕ ಪಕ್ಷದ ಕಚೇರಿಗೆ, ಧ್ವನಿವರ್ಧಕಗಳಿಗೆ, ಹೆಲಿಕ್ಯಾಪ್ಟರ ಹಾಗೂ ಹೆಲಿಪ್ಯಾಡ್ ಪರವಾನಿಗೆ ಕೋರಿ ಸುವಿದಾ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಚುನಾವಣಾಽಕಾರಿ ಶ್ವೇತಾ ಬೀಡಿಕರ ತಿಳಿಸಿದ್ದಾರೆ.