ಬಾಗಲಕೋಟೆ: ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಷಾ ವಿವಾದಾತ್ಮಕ ಹೇಳಿಕೆ ಖಂಡಿಸಿ ಸೋಮವಾರ ದಲಿತಪರ ಸಂಘಟನೆಗಳು ಸೇರಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ಬಾಗಲಕೋಟೆ ಬಂದ್ ಸಂಪೂರ್ಣ ಯಶಸ್ವಿಯಾಗಿದ್ದು, ಬಂದ್ ನಿಂದ ಸಾರ್ವಜನಿಕರು ತೀವ್ರ ಪರದಾಡುವಂತಾಯಿತು.
ಬೆಳಗ್ಗೆ ೬ ಗಂಟೆಯಿAದ ಸಂಜೆ ೬ ಗಂಟೆ ವರೆಗೂ ಬಂದ್‌ಗೆ ಕರೆ ನೀಡಿದ್ದರಿಂದ ಸಸಸ೧೨ ಗಂಟೆಗಳ ಕಾಲ ಬಾಗಲಕೋಟೆ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡಿತ್ತು.
ನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಇಲಾಖೆ ಅಽಕಾರಿಗಳು ರಜೆ ಘೋಷಿಸಿದ್ದರು. ಸಾರಿಗೆ ಬಸ್ ರಸ್ತೆಗೆ ಇಳಿಯಲಿಲ್ಲ. ನಿಲ್ದಾಣದಲ್ಲಿ ಒಂದೇ ಒಂದು ಬಸ್ ಸಹ ನಿಲ್ಲಿಸಿರಲಿಲ್ಲ. ಅಂಗಡಿ, ಮುಂಗಟ್ಟು ವ್ಯಾಪಾರ ಎಲ್ಲವನ್ನು ಬಂದ್ ಮಾಡಿಸುವಲ್ಲಿ ಪ್ರತಿಭಟನಾಕಾರರ ಯಶಸ್ವಿಯಾಗಿದ್ದರು.
ಬೆಳ್ಳಂ ಬೆಳಗ್ಗೆಯೇ ಪ್ರತಿಭಟನಾಕಾರರ ನಗರದ ತುಂಬೆಲ್ಲ ಬೈಕ್ ಮೂಲಕ ಸಂಚರಿಸಿ ಯಾರೂ ಅಂಗಡಿ, ಮುಂಗಟ್ಟು ತೆಗೆಯಬಾರದೆಂದು ಮನವಿ ಮಾಡುತ್ತಿದ್ದರು. ಇದರಿಂದ ಗೂಡಂಗಡಿಗಳು ಸಹ ತೆರೆದಿರಲಿಲ್ಲ. ಜೊತೆಗೆ ತರಕಾರಿ ಮಾರುಕಟ್ಟೆಯನ್ನು ಬಂದ್ ಮಾಡಿದ್ದರಿಂದ ಸಣ್ಣ ಪುಟ್ಟ ತರಕಾರಿ ವ್ಯಾಪಾರಸ್ಥರು ನಿತ್ಯದ ಆದಾಯ ಇಲ್ಲದೇ ತೊಂದರೆ ಅನುಭವಿಸಿದರು.
ಇನ್ನು ನಗರದಲ್ಲಿ ಯಾವುದೇ ಸಣ್ಣ ಪುಟ್ಟ ಅಂಗಡಿಗಳನ್ನು ತೆರೆಯದ ಹಿನ್ನಲೆ ಕಾಲೇಜು ಹಾಗೂ ವಿವಿಧ ಕೆಲಸ ಕಾರ್ಯಗಳಿಗೆ ಬಂದಿದ್ದ ಗ್ರಾಮೀಣ ಜನರಿಗೆ ಕುಡಿಯಲು ಚಹಾ ಹಾಗೂ ಉಪಹಾರವೂ ಸಿಗದೇ ತೀವ್ರ ಬೇಸರ ವ್ಯಕ್ತಪಡಿಸಿದರು. ಇನ್ನು ಆಸ್ಪತ್ರೆಗೆ ಬಂದಿದ್ದ ರೋಗಿಗಳಿಗೆ ಮರಳಿ ಊರಿಗೆ ಹೋಗಲು ಬಸ್ ಸೌಕರ್ಯ ಇಲ್ಲದೇ ತೊಂದರೆ ಅನುಭವಿಸಿದರು. ಮಂಗಳೂರನಲ್ಲಿ ತಮ್ಮ ಪುಟ್ಟ ಬಾಲಕನಿಗೆ ಶಸöಚಿಕಿತ್ಸೆ ಮಾಡಿಸಿಕೊಂಡು ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಇಳಿದು, ಇಲ್ಲಿಂದ ಹುನಗುಂದ ತಾಲೂಕಿನ ಗ್ರಾಮಕ್ಕೆ ತೆರಳಬೇಕಿದ್ದ ಕುಟುಂಬವAತೂ ಹಲವು ಗಂಟೆಗಳ ಕಾಲ ನಿಲ್ದಾಣದಲ್ಲಿ ಕಾಯ್ದರು ಬಸ್ ಇಲ್ಲದೇ ತೀವ್ರ ಪರದಾಡಿದರು., ಪುಟ್ಟ ಮಕ್ಕಳ ಜೊತೆಗೆ ನಿಲ್ದಾಣದಲ್ಲಿ ಕಾಲ ಕಳೆದರು.
ಇನ್ನು ಆಸ್ಪತ್ರೆಗಳು, ಔಷಧ ಅಂಗಡಿಗಳು, ಸರ್ಕಾರಿ ಇಲಾಖೆಗಳು, ಬ್ಯಾಂಕ್ ಗಳು ಎಂದಿನಿAದ ಕಾರ್ಯನಿರ್ವಹಿಸಿದವು. ಆದರೆ, ಬಸ್ ಸೌಲಭ್ಯ ಇಲ್ಲದ್ದರಿಂದ ಗ್ರಾಮೀಣ ಭಾಗದಿಂದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಹಾಗೆಯೇ ಬಂದ್ ನಿಂದ ವ್ಯಾಪಾರ, ವಹಿವಾಟು ಬಂದ್ ಆಗಿದ್ದರಿಂದ ವ್ಯಾಪಾರಸ್ಥರು ಕೋಟ್ಯಂತರ ರೂ. ಲಾಸ್ ಅನುಭವಿಸಿದರು.
ಬಂದ್ ಹಿನ್ನಲೆಯಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ನೂರಾರು ಯುವಕರು ಬೈಕ್ ರ‍್ಯಾಲಿ ನಡೆಸಿದರು. ಬಳಿಕ ಅಂಬೇಡ್ಕರ್ ವೃತ್ತದಿಂದ ವಲ್ಲಭಬಾಯಿ ಚೌಕ್, ಎಂ.ಜಿ.ರಸ್ತೆ ಮೂಲಕ ಬಸವೇಶ್ವರ ವೃತ್ತದ ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮಧ್ಯಾಹ್ನ ಹೊಳೆ ಆಂಜನೇಯ ದೇವಸ್ಥಾನ ಬಳಿಕ ಆವರಣದಲ್ಲಿ ಪ್ರತಿಭಟನಾ ಸಭೆ ನಡೆಸಿದರು. ಸಭೆಯಲ್ಲಿ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರು ಭಾಗವಹಿಸಿ, ಅಮಿತ್ ಷಾ ಹೇಳಿಕೆ ಖಂಡಿಸಿದರು.
ಪ್ರತಿಭಟನಾ ಸಭೆ ಮುಕ್ತಾಯಗೊಂಡರೂ ಸಂಜೆ ೬ ಗಂಟೆ ವರೆಗೂ ವೇದಿಕೆ ಇದ್ದಿದ್ದರಿಂದ ಅಲ್ಲಿವರೆಗೂ ವ್ಯಾಪಾರಸ್ಥರು ಅಂಗಡಿ, ಮುಂಗಟ್ಟು ತಗೆಯಲು ಮುಂದಾಗಲಿಲ್ಲ.
ಬ0ದ್ ಗೆ ದಲಿತಪರ ಸಂಘಟನೆಗಳ ಜೊತೆಗೆ ಹಿಂದುಳಿದ ವರ್ಗದ ಸಂಘಟನೆ, ವಕೀಲರ ಸಂಘದ ಜಿಲ್ಲಾ ಅಧ್ಯಕ್ಷ ರಮೇಶ್ ಬದ್ನೂರ, ಕರವೇ ಸೇರಿ ಅನೇಕ ಸಂಘಟನೆಗಳು ಬೆಂಬಲಿಸಿದ್ದವು.