ಜಿಲ್ಲೆ

ಬಾಗಲಕೋಟೆ ತೋ.ವಿ.ವಿ.ಗೆ ಕುತ್ತು ತರುವ ಸರ್ಕಾರ

ಬಾಗಲಕೋಟೆ: ಬಾಗಲಕೋಟೆಯಲ್ಲಿ ಇರುವ ದೇಶದ ೩ನೇ ಹಾಗೂ ರಾಜ್ಯದ ಏಕೈಕ ಸ್ವತಂತ್ರ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಕುತ್ತು ತರುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ಉತ್ತರ ಕರ್ನಾಟಕದ ಬಗೆಗಿನ ತನ್ನ ತಾರತಮ್ಯ ನೀತಿಯನ್ನು ಮುಂದುವರೆಸಿದೆ. ಆದರೆ, ಜಿಲ್ಲೆಯ ಜನರು ಯಾವುದೇ ಕಾರಣಕ್ಕೆ ತೋ.ವಿ.ವಿ. ಕುಗ್ಗಿಸಲು ಅವಕಾಶ ಕೊಡಲ್ಲ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಆಕ್ರೋಶ ಹಾಗೂ ಎಚ್ಚರಿಕೆಯನ್ನು ನೀಡಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರಂತಿಮಠ, ರಾಜ್ಯ ಸರ್ಕಾರ ಮಂಡ್ಯ ಜಿಲ್ಲೆಯ ವಿಶ್ವೇಶ್ವರಯ್ಯ ಕಾಲುವೆ -Áರಂನಲ್ಲಿ ನೂತನವಾಗಿ ಸ್ಥಾಪಿಸುತ್ತಿರುವ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಕ್ಕೆ ಬಾಗಲಕೋಟೆ ತೋಟಗಾರಿಕೆ ವಿಶ್ವಿವಿದ್ಯಾಲಯ ವ್ಯಾಪ್ತಿಗೆ ಒಳಪಡುವ ತೋಟಗಾರಿಕೆ ಕಾಲೇಜು ಮೈಸೂರ, ಎಚ್.ಆರ್.ಇ.ಸಿ. ಮೈಸೂರ, ಅರಸೀಕೆರೆಯ ಎಐಸಿಆರ್‌ಪಿ(ತಾಳೆಗಳು), ಅರಸೀಕೆರೆಯ ತೋಟಗಾರಿಕೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಹಾಸನದ ಎಚ್‌ಆರ್‌ಇಸಿ, ಎಐಸಿಆರ್‌ಪಿ(ಆಲೂಗಡ್ಡೆ) ಇವುಗಳನ್ನು ನೂತನ ಮಂಡ್ಯ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಹಸ್ತಾಂತರಿಸಲು ಸರ್ಕಾರ ತಾತ್ವಿಕ ಅನುಮೋದನೆ ನೀಡಿ ಆದೇಶ ಹೊರಡಿಸಿದೆ. ಆ ಮೂಲಕ ಬಾಗಲಕೋಟೆ ತೋ.ವಿವಿ ಕುಗ್ಗಿಸಲು ಮುಂದಾಗಿದ್ದು, ಸರ್ಕಾರದ ಈ ನಿರ್ಧಾರ ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.

ಹಿಂದೆ ೨೦೨೮ರಲ್ಲಿ ಬಿಜೆಪಿ ಸರ್ಕಾರದ ಅವಽಯಲ್ಲಿ ಪ್ರತ್ಯೇಕ ತೋಟಗಾರಿಕೆ ವಿವಿಯನ್ನು ಬಾಗಲಕೋಟೆಗೆ ತಂದು, ಸಾಕಷ್ಟು ಅಭಿವೃದ್ಧಿ ಪಡಿಸಿದ್ದೇವೆ. ೨೪ ಜಿಲ್ಲೆಗಳ ವ್ಯಾಪ್ತಿಯನ್ನು ಹೊಂದಿರುವ ಈ ವಿವಿಯನ್ನು ಅಭಿವೃದ್ಧಿ ಪಡಿಸಲು ಹೆಚ್ಚೆಚ್ಚು ಅನುದಾನ ಒದಗಿಸುವ ಬದಲಿಗೆ ಸಿದ್ದರಾಮಯ್ಯ ಸರ್ಕಾರ, ವಿವಿಗೆ ಅನುದಾನ ಕಡಿಮೆ ಮಾಡಿ, ಅದನ್ನು ದುರ್ಬಲಗೊಳಿಸಿ, ಹಂತ ಹಂತವಾಗಿ ವಿವಿ ಇಲ್ಲದಂತೆ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿಸಿದರು.

ಉತ್ತರ ಕರ್ನಾಟಕ್ಕೆ ಮೊದಲೇ ಅಭಿವೃದ್ಧಿ ವಿಚಾರದಲ್ಲಿ ನಿರ್ಲಕ್ಷ್ಯ ಮಾಡುವ ಸರ್ಕಾರ, ಇದೀಗ ನಮ್ಮ ಸರ್ಕಾರ ಸ್ಥಾಪನೆ ಮಾಡಿದ್ದ ಏಕೈಕ ತೋಟಗಾರಿಕೆ ವಿವಿ ಮೇಲೂ ವಕ್ರದೃಷ್ಟಿ ಹರಿಸಿದೆ. ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಜಿಲ್ಲೆ ಬಾದಾಮಿ ಕ್ಷೇತ್ರ ರಾಜಕೀಯ ಪುನರ್ ಜನ್ಮ ನೀಡಿದ್ದನ್ನು ಸಹ ಅವರು ಮರೆತು ಜಿಲ್ಲೆಗೆ ಅನ್ಯಾಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅವರು ಜಿಲ್ಲೆಯ ಋಣ ತೀರಿಸಲು ಇಲ್ಲಿಗೆ ಹೊಸದಾಗಿ ಯೋಜನೆ ಕೊಡದಿದ್ದರೂ ಕನಿಷ್ಠ ಬೇರೆ ಸರ್ಕಾರ ಮಾಡಿರುವ ಸಂಸ್ಥೆಗಳನ್ನು ಕಿತ್ತುಕೊಳ್ಳುವ ಕೆಲಸವನ್ನಾದರೂ ನಿಲ್ಲಿಸಲಿ ಎಂದು ಕಿಡಿಕಾರಿದರು.

ಮಂಡ್ಯದಲ್ಲಿ ನೂತನ ಕೃಷಿ ಮತ್ತು ತೋಟಗಾರಿಕೆ ವಿವಿ ಸ್ಥಾಪನೆಗೆ ನಮ್ಮದೇನು ತಕರಾರು ಇಲ್ಲ. ಆದರೆ, ಮಂಡ್ಯ ವಿವಿಗಾಗಿ ಬಾಗಲಕೋಟೆ ತೋ.ವಿವಿ. ನಿಷ್ಕೀೃಯಗೊಳುಸುವ ಅವರ ಯತ್ನವನ್ನು ಉತ್ತರ ಕರ್ನಾಟಕದ ಜನರು ಒಪ್ಪಲು ಸಾಧ್ಯವೇ ಇಲ್ಲ. ಕೃಷಿ ಸಚಿವ ಚಲುವರಾಯಸ್ವಾಮಿ ಒಂದು ಮುಕ್ಕಾಲು ವರ್ಷ ಕಳೆದರೂ ಒಂದೇ ಒಂದು ಸಲ ಈ ಭಾಗಕ್ಕೆ ಭೇಟಿ ಕೊಟ್ಟಿಲ್ಲ, ಬರ, ಪ್ರವಾಹ, ಅತೀವೃಷ್ಟಿಯಲ್ಲಿ ರೈತರ ಅನುಭವಿಸಿದ ಸಂಕಷ್ಟ ಆಲಿಸಲು ಬಂದಿಲ್ಲ. ಇದೀಗ ತನ್ನ ತವರು ಜಿಲ್ಲೆಯ ಪ್ರೇಮಕ್ಕೆ ಉತ್ತರ ಕರ್ನಾಟಕದ ಹಕ್ಕು, ಅವಕಾಶ ಕಿತ್ತುಕೊಳ್ಳಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಇದೇ ಪ್ರೀತಿ ತಮಗೆ ರಾಜಕೀಯ ಪುನರ್ ಜನ್ಮ ನೀಡಿದ ಜಿಲ್ಲೆ ಮೇಲೆ ಏಕಿಲ್ಲ? ಕೃಷ್ಣಾ ಮೇಲ್ದಂಡೆ ಯೋಜನೆ ಅನುಷ್ಠಾನದಲ್ಲಿ ಅವರಿಗೆ ಈ ಪ್ರೀತಿ, ಕಾಳಜಿ ಏಕಿಲ್ಲ ಎಂದು ಖಾರವಾಗಿ ಪ್ರಶ್ನಿಸಿದರು.