ಬಾಗಲಕೋಟೆ-ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಮುಖಂಡರು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಭೇಟಿ ನೀಡಿ ಮನವಿ ಸಲ್ಲಿಸಿದರು. ಹೋರಾಟ ಸಮಿತಿಯ ಅಧ್ಯಕ್ಷ ಕುತುಬುದ್ದಿನ, ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ, ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಸೇರಿದಂತೆ ಇತರರು ಇದ್ದರು 
ಜಿಲ್ಲೆ

ಬಾಗಲಕೋಟೆ -ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಿ

ಬಾಗಲಕೋಟೆ: ಬಾಗಲಕೋಟೆ-ಕುಡಚಿ ರೈಲು ಮಾರ್ಗ ಪೂರ್ಣಗೊಳಿಸಲು ಕ್ರಮ ತೆಗೆದುಕೊಳ್ಳಬೇಕು. ಭೂ ಸ್ವಾಧೀನಕ್ಕೆ ಅಗತ್ಯವಿರುವ ಅನುದಾನ ಬಿಡುಗಡೆ ಗೊಳಿಸಬೇಕು ಎಂದು ಆಗ್ರಹಿಸಿ ಬಾಗಲಕೋಟೆ ರೈಲ್ವೆ ಹೋರಾಟ ಸಮಿತಿ ಮುಖಂಡರು ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅವರನ್ನು ಸೋಮವಾರ ಭೇಟಿ ನೀಡಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕುತುಬುದ್ದಿನ ಖಾಜಿ ಮಾತನಾಡಿ, ಬಾಗಲಕೋಟೆ-ಕುಡಚಿ ರೈಲು ಮಾರ್ಗ ಕುಟುಂತ ಸಾಗಿದ್ದು, ಯೋಜನೆಯ ವೆಚ್ಚವು ಅಂದಾಜು ೪೦೦೦ ನಾಲ್ಕು ಸಾವಿರ ಕೊಟಿಗೆ ತಲುಪಿದ್ದು, ಅತೀ ಶಿಘ್ರದಲ್ಲಿ ಜಿಲ್ಲಾದ್ಯಂತ ಏಕ ಕಾಲಕ್ಕೆ ಪ್ರತಿ ೨೦ ಕಿಮೀ ಗೆ ಒಬ್ಬ ಗುತ್ತಿಗೆದಾರನನ್ನು ನೇಮಕಗೊಳಿಸಿ ೧೨ ತಿಂಗಳ ಕಾಲುಮೀತಿ ಅಳವಡಿಸಿ ಕಾಮಗಾರಿಗೊಳಿಸಬೇಕು.

ರಾಜ್ಯ ಸರ್ಕಾರದ ಸುತ್ತೋಲೆಯಂತೆ ಈಗಾಗಲೆ ಯೋಜನೆಗೆ ಅಗತ್ಯವಿರುವ ೩೨೦೦ ಎಕರೆ ಭೂಮಿಯನ್ನು ೨೧ ಎಕರೆ ಹೊರತು ಪಡಿಸಿ ರೇಲ್ವೆ ಇಲಾಖೆಗೆ ಹಸ್ಥಾಂತರಿಸಿದೆ ಎಂದು ದಾಖಲೆಗಳು ಹೇಳುತ್ತವೆ. ಆದರೆ ಕಳೆದ ಹಲವು ವರ್ಷಗಳಿಂದ ರೆಲ್ವೆ ಇಲಾಖೆಯು ಭೂಮಿಯನ್ನು ರಾಜ್ಯ ಸರ್ಕಾರ ಕೊಟ್ಟಿಲ್ಲ. ನಾವು ರೇಲ್ವೆ ಮಾರ್ಗ ನಿರ್ಮಾಣ ಮಾಡುವದು ಎಲ್ಲಿದೆ ಅಂತಾ ನೆಪಾ ಹೇಳುತ್ತಾ ಕಾಲ ಕಳೆದಿದೆ. ಒಟ್ಟಾರೆ ಗೊಂದಲದ ಗೂಡಾಗಿದೆ. ಕೂಡಲೇ ಕಾಮಗಾರಿ ಆರಂಭಿಸಬೇಕು. ಇಲ್ಲವಾದಲ್ಲಿ ಧರಣಿ ನಡೆಸಲಾಗುವುದು ಎಂದು ಆಗ್ರಹಿಸಿದರು.

ಹೋರಾಟ ಸಮಿತಿಯ ಉಪಾಧ್ಯಕ್ಷ ಶ್ರೀನಿವಾಸ ಬಳ್ಳಾರಿ. ಜಿ.ಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಶಾಶ ತಪಶೆಟ್ಟಿ. ಗಣಪತರಾವ ಹಜಾರೆ, ಸುರೇಶ ಚಿಂಡಕ ಡಾ.ರವಿ ಜಮಖಂಡಿ, ಧರಿಯಪ್ಪ ಉಳ್ಳಾಗಡ್ಡಿ, ಗೊವಿಂದರಾಜ ಬಳ್ಳಾರಿ, ಶಫೀಕ್ ಜಮಾದಾರ, ಮೈನುದ್ದಿನ ಖಾಜಿ ಇದ್ದರು.