ಜಿಲ್ಲೆ

ಬಾಕಿ ವೇತನ ಪಾವತಿಸಲು ಒತ್ತಾಯ

ಯಾದಗಿರಿ: ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿರುವ ಹಾಸ್ಟೆಲ್ ನೌಕರರಿಗೆ ಕೂಡಲೇ ಬಾಕಿ ವೇತನ ಪಾವತಿಸುವಂತೆ ಒತ್ತಾಯಿಸಿ ಗುರುವಾರ ಇಲ್ಲಿನ ಜಿಲ್ಲಾಕಾರಿ ಕಚೇರಿ ಮುಂದೆ ಕನರ್ಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾಮರ್ಿಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.

ಸಂಘದ ಜಿಲ್ಲಾ ಕಾರ್ಯದಶರ್ಿ ರಾಮಲಿಂಗಪ್ಪ ಬಿ.ಎನ್., ಮಾತನಾಡಿ ,ಯಾದಗಿರಿ ಹಾಗೂ ಗುರುಮಠಕಲ್ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಮತ್ತು ಪರಿಶಿಷ್ಠ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಿದ್ಯಾಥರ್ಿ ವಸತಿ ನಿಲಯಗಳಲ್ಲಿ ಅಡಿಗೆ ಹಾಗೂ ಅಡಿಗೆ ಸಹಾಯಕರು ಮತ್ತು ಕಾವಲುಗಾರರ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದು ಕಳೆದ ಐದಾರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಅವರ ಕುಟುಂಬಗಳು ಬೀದಿಗೆ ಬರುವಂತಾಗಿದೆ ಎಂದು ಆರೋಪಿಸಿದರು.

ವಸತಿ ನಿಲಯಗಳಲ್ಲಿ ವಿದ್ಯಾಥರ್ಿಗಳಿಗೆ ಉತ್ತಮ ಊಟ, ನಿಲಯದ ಸ್ವಚ್ಛತೆ, ಸುರಕ್ಷತೆ ಸೇರಿ ಕಠಿಣ ಪರಿಶ್ರಮ ವಹಿಸಿ ನೌಕಕರು ಕೆಲಸ ಮಾಡುತ್ತಿದ್ದಾರೆ. ಆದರೆ ಸೇವೆಗೆ ತಕ್ಕ ವೇತನ ಪ್ರತಿ ತಿಂಗಳು ಸಿಗುತ್ತಿಲ್ಲ. ವರ್ಷದಲ್ಲಿ ಎರಡು, ಮೂರಿ ಮಾತ್ರ ವೇತನ ನೀಡುತ್ತಿದ್ದು ಇದರಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದರು.

ಕೂಡಲೇ ಈ ನೌಕರರ ಬಾಕಿ ವೇತನ ಬಿಡುಗಡೆ ಮಾಡಬೇಕು. ಎಲ್ಲ ಕಾಮರ್ಿಕರಿಗೆ ಇಪಿಎಫ್ ಕಾಡರ್್ ಮತ್ತು ವೇತನ ಚೀಟಿ ನೀಡಬೇಕು ಮತ್ತು ವಾರದ ರಜೆ, ರಾಷ್ಟ್ರೀಯ ಹಬ್ಬಗಳ ರಜೆ ಕೊಡಬೇಕು ಎಂದು ಆಗ್ರಹಿಸಿದರು.

ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ತಿಳಿಗೇರಿಕರ್, ಜಗದೇವಿ, ಶ್ರೀಗಿರಿ, ಶ್ರೀಕಾಂತ್ ಚಿಕ್ಕಮೇಟಿ, ಭೀಮಾಶಂಕರ್, ಗಜಾನಂದ, ಭಾಗಪ್ಪ, ಶ್ಯಾಮಪ್ಪ, ಸರಿತಾ, ಯಶೋದಾ, ದೇವಿ, ಶಭೀರಮ್ಮ, ಅಂಜಲಪ್ಪ, ಗಂಗಿಮಾಳಮ್ಮ, ಲಕ್ಷ್ಮೀ ಕಟ್ಟಿಮನಿ, ಪುಷ್ಪಲತಾ, ಅಂಜಮ್ಮ, ನಾಗಮ್ಮ, ರೇಣುಕಾ, ಜಹಾಂಗಿರ ಬೇಗಂ, ಪರಿಮಳಾ, ಅರ್ಚನಾ ಇದ್ದರು.