ಕಲಬುರಗಿ: ಸಾರಿಗೆ ನಿಗಮಗಳ ಬಾಕಿಯನ್ನು ಎರಡು ಸಾವಿರ ಕೋಟಿ ರೂ. ಸಾಲ ಪಡೆದು, ತೀರಿಸಲಾಗುವುದು. ಕೆಕೆಆರ್ಟಿಸಿ ಸೇರಿ ಹಲವು ನಿಗಮಗಳಿಗೆ ಹಣ ನೀಡಬೇಕಿದ್ದು, ಬಾಕಿ ಹಣ ರ‍್ಕಾರವೇ ಭರಿಸಲಿದೆ. ನಿಗಮಗಳು ಭರಿಸುವುದಿಲ್ಲ ಎಂದು ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ೨೦೦೦ ಹೊಸ ಬಸ್ ಬಜೆಟ್ನಲ್ಲಿ ೂಷಿಸಲಿದ್ದು, ಕಲ್ಯಾಣ ರ‍್ನಾಟಕ ಸಾರಿಗೆ ಸಂಸ್ಥೆಗೆ ೭೦೦ ಬಸ್ ನೀಡಲಾಗುವುದು. ೭೦೦ ಬಸ್ ವಾಯುವ್ಯ ಸಾರಿಗೆ ನೀಡಲಾಗುತ್ತಿದೆ. ಉಳಿದ ಬಸ್ಗಳನ್ನು ಕೆಕೆಎಸ್ಆರ್ಟಿಸಿ ನಿಗಮಕ್ಕೆ ನೀಡಲಾಗುವುದು. ಸದ್ಯ ಬಿಎಂಟಿಸಿಯಿಂದ ಬೇಡಿಕೆ ಇಲ್ಲ. ಕಲ್ಯಾಣ ರ‍್ನಾಟಕ ಸಾರಿಗೆ ಅಧಿಕಾರಿಗಳು ಪ್ರಪೋಸಲ್ ಶ್ರೀ ಸಲ್ಲಿಸಲಿ ಎಂದರು.
ಕೆಎಸ್ಆರ್ಟಿಸಿಯಲ್ಲಿ ಸಿಬ್ಬಂದಿ ಆರೋಗ್ಯ ತಪಾಸಣೆ ಜನೆವರಿಯಿಂದ ನಡೆಸಲಾಗುತ್ತಿದೆ. ಜುಲೈನಿಂದ ಕೆಕೆಆರ್ಟಿಸಿಯಲ್ಲಿ ಆರಂಭ ಮಾಡಲಾಗುವುದು ಎಂದು ಶಕ್ತಿ ಯೋಜನೆಯಿಂದ ಸಾರಿಗೆ ನಿಗಮಗಳ ಸಿಬ್ಬಂದಿಗೆ ಕೆಲಸದ ಒತ್ತಡ ಜಾಸ್ತಿಯಾಗುತ್ತಿದೆ ಪ್ರಶ್ನೆಗೆ ಉತ್ತರಿಸಿದರು. ಜಯದೇವದಲ್ಲಿ ಸಿಬ್ಬಂದಿ ಕುಟುಂಬಕ್ಕೆ ಕ್ಯಾಶ್ಲೆಸ್ ಆರೋಗ್ಯ ಸೌಲಭ್ಯ ಕಲ್ಪಿಸಲಾಗುತ್ತಿದೆ. ಸಿಬ್ಬಂದಿಗೆ ಹೆಚ್ಚಿನ ಒತ್ತಡ ಕಂಡರೆ ನಿವಾರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು.