ಸುರಪುರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿದ್ದುಪಡಿ ಅಭಿಯಾನದಲ್ಲಿ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಂದ ಮಾಹಿತಿ ಪಡೆದರು. ತಹಸೀಲ್ದಾರ್ ಕೆ.ವಿಜಯಕುಮಾರ, ತಾಪಂ ಇಒ ಬಸವರಾಜ ಸಜ್ಜನ, ಶಿರಸ್ತೇದಾರ ರೇವಪ್ಪ, ಡಿವೈಎಸ್‌ಪಿ ಜಾವೇದ್ ಇನಾಮದಾರ್ ಇತರರಿದ್ದರು. 
ಜಿಲ್ಲೆ

ಬಾಕಿ ಉಳಿದ ಅರ್ಜಿ ವಿಲೇವಾಡಿ ಮಾಡಿ

ಸುರಪುರ: ಕಂದಾಯ ವಿಭಾಗಕ್ಕೆ ಸಂಬಂಧಿಸಿದಂತೆ ಅನೇಕ ಅರ್ಜಿಗಳು ವಿಲೇವಾರಿ ಆಗದೆ ಉಳಿದಿದ್ದು, ಕೂಡಲೇ ಇತ್ಯರ್ಥಗೊಳಿಸುವಂತೆ ಶಾಸಕ ರಾಜಾ ವೆಂಕಟಪ್ಪ ನಾಯಕ ಅಧಿಕಾರಿಗಳಿಗೆ ಸೂಚಿಸಿದರು.

ತಹಸಿಲ್ ಕಚೇರಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಿದ್ದುಪಡಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ಅರ್ಜಿ (ಕಡತ)ಗಳ ವಿಲೇವಾರಿಗೆ ಬೇಕಾದ ಸಹಕಾರ ನೀಡಲಾಗುವುದು ಎಂದರು.

೨೬೦ ಮೋಜಣಿ ಕಡತಗಳ ತಿದ್ದುಪಡಿ ಮಾಡಿ ಅರ್ಹರಿಗೆ ವಿತರಿಸಲಾಗಿದೆ ಎಂದು ತಹಸೀಲ್ದಾರ್ ಕೆ.ವಿಜಯಕುಮಾರ ತಿಳಿಸಿದರು. ತಾಪಂ ಇಒ ಬಸವರಾಜ ಸಜ್ಜನ ಅಭಿವೃದ್ಧಿ ಕುರಿತು ಶಾಸಕರಿಗೆ ಮಾಹಿತಿ ನೀಡಿದರು.

ಚಾಲಕರಿಗೆ ಹೆಲ್ಮೆಟ್ ಹಾಕಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಧರಿಸದವರಿಗೆ ದಂಡ ವಿಧಿಸಿ ಹೆಲ್ಮೆಟ್ ವಿತರಿಸುವುದಾಗಿ ಡಿವೈಎಸ್‌ಪಿ ಜಾವೇದ್ ಇನಾಮದಾರ್ ಹೇಳಿದರು.

ಚಾಲಕರಿಗೆ ಹೆಲ್ಮೆಟ್ ಹಾಕಿಕೊಳ್ಳುವ ಬಗ್ಗೆ ತಿಳಿವಳಿಕೆ ನೀಡಲಾಗುವುದು. ಧರಿಸದವರಿಗೆ ದಂಡ ವಿಧಿಸಿ ಹೆಲ್ಮೆಟ್ ವಿತರಿಸುವುದಾಗಿ ಡಿವೈಎಸ್‌ಪಿ ಜಾವೇದ್ ಇನಾಮದಾರ್ ಹೇಳಿದರು.

ಶಿರಸ್ತೇದಾರ ರೇವಪ್ಪ, ಸಿಪಿಐ ಆನಂದ ವಾಗ್ಮೋಡೆ, ಬಿಇಒ ಯಲ್ಲಪ್ಪ ಕಾಡ್ಲೂರು, ಕೆಂಭಾವಿ ಆರ್‌ಐ ರಾಜಾಸಾಬ್, ಕಕ್ಕೇರಾ ಆರ್‌ಐ ಮಲ್ಕಜಪ್ಪ, ಪ್ರಮುಖರಾದ ಮುಖಂಡ ವಿಠ್ಠಲ್ ಯಾದವ್, ಬಸವರಾಜ, ಹನುಮಂತ ಮೊಕಾಶಿ, ಪ್ರವೀಣ ಇತರರಿದ್ದರು.