ಕೆಂಭಾವಿ: ಧರ್ಮ ಜಾತಿಗಳ ಮಧ್ಯೆ ಉತ್ತಮ ಬಾಂಧವ್ಯ ಬೆಸೆದು ಧಾರ್ಮಿಕ ಮನೋಭಾವ ಪ್ರತಿಯೊಬ್ಬರಲ್ಲಿ ಬಿತ್ತುವ ಮತ್ತು ಸ್ನೇಹ ಸೌಹಾರ್ದತೆ ಇಮ್ಮಡಿಗೊಳಿಸುವ ನಿಟ್ಟಿನಲ್ಲಿ ಪಟ್ಟಣದ ದಸರಾ ಉತ್ಸವ ಸಮಿತಿ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.
ಸಮಿತಿಯಿಂದ ಪುರಸಭೆ ಆವರಣದಲ್ಲಿ ಗುರುವಾರ ಆಯೋಜಿಸಿದ್ದ ನಾಲ್ಕನೇ ವರ್ಷದ ದಸರಾ ಉತ್ಸವ ಸಂಭ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಬ್ಬ-ಹರಿದಿನಗಳು ಪರಸ್ಪರ ಸಂಬAಧ ಗಟ್ಟಿಗೊಳಿಸುತ್ತವೆ. ಸತತ ನಾಲ್ಕು ವರ್ಷಗಳಿಂದ ವಿಶೇಷ ಕಾರ್ಯಕ್ರಮ ಆಯೋಜಿಸುವ ಮೂಲಕ ಶಾಲಾ ಮಕ್ಕಳು, ರೈತರು, ಮಹಿಳೆಯರನ್ನು ಪ್ರೋತ್ಸಾಹಿಸುವುದರ ಜತೆಗೆ ಸಾಧಕರನ್ನು ಗುರುತಿಸುತ್ತಿರುವ ಸಮಿತಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯರು ಸಾನ್ನಿಧ್ಯ, ಸಮಿತಿ ಗೌರವಾಧ್ಯಕ್ಷ ಮುದಿಗೌಡ ಮಾಲಿಪಾಟೀಲ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿ ಲಿಂಗನಗೌಡ ಮಾಲಿಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ ದೇಶಪಾಂಡೆ, ಪುರಸಭೆ ಸದಸ್ಯ ರಹೆಮಾನ್ ಪಟೇಲ್ ಯಲಗೋಡ, ಅರುಣೋದಯ ಸೊನ್ನದ, ನಿವೃತ್ತ ಶಿಕ್ಷಕ ಅಬ್ದುಲ್ ರಜಾಕ್, ನೀಲಕಂಠರಾಯಗೌಡ ಪಾಟೀಲ, ರಫೀಕ್ ವಡಕೇರಿ, ಬಿ.ರಾಘವೇಂದ್ರ, ತೋಟಪ್ಪ ಸಾಹು, ಗುರುಮೂರ್ತಿ ಪತ್ತಾರ, ನರಸಿಂಹ ವಡ್ಡೆ ಇತರರಿದ್ದರು. ಬಂದೇನವಾಜ ನಾಲತವಾಡ ನಿರೂಪಣೆ ಮಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಡಿ.ಸಿ. ಪಾಟೀಲ ಸ್ವಾಗತಿಸಿದರು. ಪರಶುರಾಮ ನಾರಾಯಣಕರ್ ವಂದಿಸಿದರು.
ನAತರ ನಡೆದ ಹಾಸ್ಯ ಸಂಜೆ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಗುಂಡಣ್ಣ ಡಿಗ್ಗಿ ನೆರೆದಿದ್ದ ಪ್ರೇಕ್ಷಕರನ್ನು ಚಟಾಕಿಗಳ ನಗೆ ಗಡಲಲ್ಲಿ ತೇಲಿಸಿದರು. ಅಡವಿ ಸೋಮಪುರದ ಜಾನಪದ ಕಲಾ ತಂಡದ ಸದಸ್ಯರು ನಡೆಸಿಕೊಟ್ಟ ಜಾನಪದ ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನೋಡುಗರನ್ನು ಸೆಳೆಯಿತು.
ವಿವಿಧ ಕ್ಷೇತ್ರದ ಸಾಧಕರಾದ ಹಿರಿಯ ಪತ್ರಕರ್ತ ಸಂಜೀವರಾವ ಕುಲಕರ್ಣಿ (ವರ್ಷದ ವಿಶೇಷ ವ್ಯಕ್ತಿ), ಯಮುನೇಶ ಯಾಳಗಿ, ರಾಜಅಹ್ಮದ್ ಹುಳಬುತ್ತಿ, ಚಂದ್ರನೀಲಾ ಕಟ್ಟಿ, ಬಸಮ್ಮ ಕುಂಬಾರ (ಆದರ್ಶ ಶಿಕ್ಷಕ ರತ್ನ ಪ್ರಶಸ್ತಿ), ಗಿರೆಪ್ಪ ಮ್ಯಾಗೇರಿ (ಉತ್ತಮ ಕೃಷಿಕ ಪ್ರಶಸ್ತಿ), ಮಾಸಾಬಿ ಮಾಸುಮಸಾಬ ವಡಕೇರಿಗೆ ಸೇವಾ ಸರ್ವೋತ್ತಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.