ಕಲಬುರಗಿ: ಹೃದಯ ವೈಫಲ್ಯ, ಮೂತ್ರಪಿಂಡ ತೊಂದರೆ, ಸ್ತನಗಳ ಬಾವು ಮತ್ತು ಸೇಫ್ಟಿಕ್ ಶಾಕ್ ನಂತಹ ಗಂಭೀರ ಕಾಯಿಲೆಗಳಿಂದ ನರಳುತ್ತಿರುವ ೨೫ ವರ್ಷದ ಯುವತಿಗೆ ಬಸವೇಶ್ವರ ಆಸ್ಪತ್ರೆ ಸಾಮಾನ್ಯ ವೈದ್ಯಕೀಯ ವಿಭಾಗದ ವೈದ್ಯರು ಚಿಕಿತ್ಸೆ ನೀಡಿ, ಗುಣಮುಖ ಮಾಡಿ, ಗಮನ ಸೆಳೆದಿದ್ದಾರೆ.
ಸೇಡಂ ತಾಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ನಂತರ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾದಾಗ, ಅಧಿಕ ರಕ್ತದೊತ್ತಡ, ಮೂತ್ರಪಿಂಡದಲ್ಲಿ ಸಮಸ್ಯೆ, ಹೃದಯ ವೈಫಲ್ಯ, ಸೇಫ್ಟಿಕ್ ಶಾಕ್ ಮತ್ತು ಸ್ತನದಲ್ಲಿ ಬಾವು ಸೇರಿ ಗಂಭೀರ ಸಮಸ್ಯೆಯೊಂದಿಗೆ ವೆಂಟಿಲೇಟರ್‌ನೊAದಿಗೆ ಜೀವನ್ಮರಣದ ಸ್ಥಿತಿಯಲ್ಲಿದ್ದಳು.
ಬಸವೇಶ್ವರ ಆಸ್ಪತ್ರೆಯ ಸಾಮಾನ್ಯ ವೈದ್ಯಕೀಯ ವಿಭಾಗದ ತಜ್ಞ ಡಾ.ಬಸವರಾಜ ರಾಯಕೋಡ ಪಾಟೀಲ್ ನೇತೃತ್ವದಲ್ಲಿ ಡಾ.ಅಭಿಷೇಕ ಮಾಲಿಪಾಟೀಲ್, ಡಾ.ಕರಣ ಬಿಜಾಪರೆಉ, ಡಾ.ಸೋಹೆಲ್, ಮತ್ತು ಡಾ.ಪ್ರತೀಕ್, ಎಂಡಿ ವಿದ್ಯಾರ್ಥಿಗಳು, ಶಸ್ತç ಚಿಕಿತ್ಸಜ್ಞ ಡಾ.ಸಂಗಮೇಶ ಪಾಟೀಲ್ ಅವರ ವಿಶೇಷ ಕಾಳಜಿ, ಚಿಕಿತ್ಸೆ, ಔಷದೋಪಚಾರ, ನಿರಂತರ ನಿಗಾ ವಹಿಸಿ, ಗುಣಮುಖ ಮಾಡಿದ್ದು, ಆಯುಷ್ಮಾನ ಭಾರತ ಯೋಜನೆ ಅಡಿ ಸಂಪೂರ್ಣವಾಗಿ ಉಚಿತ ಚಿಕಿತ್ಸೆ ನೀಡಲಾಗಿದೆ.
ವೈದ್ಯರ ಕಾರ್ಯಕ್ಕೆ ಎಚ್‌ಕೆಇ ಅಧ್ಯಕ್ಷ ಶಶೀಲ ನಮೋಶಿ, ಆಡಳಿತ ಮಂಡಳಿ ಸದಸ್ಯರು, ಮಹಾದೇವಪ್ಪ ರಾಂಪುರೆ ವೈದ್ಯಕೀಯ ಕಾಲೇಜಿನ ಡೀನ್ ಡಾ.ಶರಣಗೌಡ ಪಾಟೀಲ್, ಆಸ್ಪತ್ರೆ ಅಧೀಕ್ಷಕ ಡಾ.ಆನಂದ ಗಾರಂಪಳ್ಳಿ, ಮುಖ್ಯಸ್ಥ ಡಾ.ಸುರೇಶ ಹರಸೂರ ಅಭಿನಂದನೆ ತಿಳಿಸಿದ್ದಾರೆ.