ಜಿಲ್ಲೆ

ಬಹುತ್ವವಿಲ್ಲದ ಸಂಘಟನೆ ಜಾತಿ ಕೊಂಪೆ

ಕಲಬುರಗಿ: ಭಾರತ ಬಹುತ್ವದ ದೇಶವಾಗಿದ್ದು, ಇಲ್ಲಿ ಸಂಘಟನೆಗಳನ್ನು ಕಟ್ಟಿಕೊಂಡು ಬಹುತ್ವ ಒಳಗೊಳ್ಳುವ ಗುಣ ಇಲ್ಲದಿದ್ದರೆ ಅವು ಜಾತಿಯ ಕೊಂಪೆಗಳಾಗುತ್ತವೆ. ಇಲ್ಲವೇ ಗೊತ್ತು ಗುರಿ ಇಲ್ಲದ ರೋಗಗ್ರಸ್ತ ಸಂಘಟನೆಗಳಾಗಿ ಅಳಿದು ಹೋಗುತ್ತವೆ ಎಂದು ಚಿಂತಕ, ಸಾಹಿತಿ ಪ್ರೊ.ಎಸ್.ಜಿ.ಸಿದ್ಧರಾಮಯ್ಯ ಹೇಳಿದರು.

ನಗರದ ವಿ.ಜಿ.ಮಹಿಳಾ ಕಾಲೇಜಿನಲ್ಲಿ ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದಿAದ ಭಾನುವಾರ ಹಮ್ಮಿಕೊಂಡ ಕೃತಿಗಳ ಬಿಡುಗಡೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ೨೦೨೪ರಲ್ಲಿ ಪ್ರಕಟಿಸಿದ್ದ ೧೦ ಕೃತಿ ಬಿಡುಗಡೆ ಮಾಡಿ ಮಾತನಾಡಿ, ದೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿ ಇರಲು ಸಾಮರಸ್ಯ, ಸಹಬಾಳ್ವೆ, ಸಹೋದರತ್ವ ಮಹತ್ವದ ಪಾತ್ರ ವಹಿಸುತ್ತವೆ. ಪ್ರತಿ ವ್ಯಕ್ತಿಯನ್ನು ಸೇರಿ ಸಮುದಾಯ, ಸಂಘಟನೆಗಳವರೆಗೆ ಈ ಪ್ರಕ್ರಿಯೆ ನಡೆಯಬೇಕು ಎಂದರು.

ಭಾರತದಲ್ಲಿ ಹುಟ್ಟಿದ್ದು ಮೋಹನದಾಸ್ ಕರಮಚಂದ್ ಗಾಂಧಿ ಮಾತ್ರ. ದಕ್ಷಿಣ ಆಫ್ರಿಕಾದಲ್ಲಿ ಮಹಾತ್ಮ ಹುಟ್ಟಿದ್ದು. ೨೧ ವರ್ಷ ವರ್ಣಭೇದ ನೀತಿ ವಿರುದ್ಧ ಹೋರಾಡಿದ ಗಾಂಧೀಜಿ ಆತ್ಮಕಥೆ ಸಾರ್ವಕಾಲಿಕವಾಗಿದೆ. ಆತ್ಮಕಥೆಗಳು ಆತ್ಮಮರುಕ ಆಗದೆ ಆತ್ಮವಿಮರ್ಶೆ ಆಗಬೇಕು. ವ್ಯಕ್ತಿ ಕೂಪಮಂಡುಕನAತೆ ಮಿತಿ ಹೇರಿ ಏನೇ ಬರೆದರೂ ಸಮಾಜಕ್ಕೆ ಉತ್ತದಾಯಿತ್ವ ದೊರೆಯಲ್ಲ. ಆತ್ಮಾವಲೋಕನ ಮಾಡಿಕೊಳ್ಳುತ್ತ ಸತ್ಯ ಪ್ರತಿಪಾದಿಸುತ್ತ ಆತ್ಮಗೌರವ ಉಳಿಸಿಕೊಂಡು ಮುನ್ನಡೆಯಬೇಕು ಎಂದು ಹೇಳಿದರು.

ವಿವಿಧ ಪ್ರಶಸ್ತಿ ಪ್ರದಾನ: ಕೊಪ್ಪಳದ ಸಾಹಿತಿ ಎಚ್.ಎಸ್.ಪಾಟೀಲ ಅವರಿಗೆ ಜೀವಮಾನ ಸಾಧನೆಗಾಗಿ ಕನ್ನಡನಾಡು ಸಾಹಿತ್ಯಶ್ರೀ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಮಾದೇವಿ ಆರ್.ದಂಡೋತಿ ಅವರಿಗೆ ಮಾಪಮ್ಮ ಶಂಭುಲಿAಗ ಹೊಸಮನಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ, ಸಿದ್ದರಾಮ ಹೊನಕಲï ಶಹಾಪುರಗೆ (ಪ್ರೊ.ಎಸ್.ಜಿ.ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ), ಅಮರೇಶ ಯತಗಲ್‌ಗೆ (ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ್ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ), ಸುಭಾಶ್ಚಂದ್ರ ಕಶೆಟ್ಟಿ (ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋಣೆ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ) ಹಾಗೂ ಕನ್ನಡ ನಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ಸಾಹಿತ್ಯ ಕೃತಿ ಪ್ರಶಸ್ತಿಯನ್ನು ಗುಂಡುರಾವ್ ದೇಸಾಯಿ ಅವರಿಗೆ ಪ್ರದಾನ ಮಾಡಲಾಯಿತು.

ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ವಿತರಿಸಿದರು. ಸಂಘದ ಉಪಾಧ್ಯಕ್ಷ, ಸಾಹಿತಿ ಸ್ವಾಮಿರಾವ ಕುಲಕರ್ಣಿ ಪ್ರಾಸ್ತಾವಿಕ ಮಾತನಾಡಿದರು. ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಮಾತನಾಡಿದರು. ಸಂಘದ ಅಧ್ಯP್ಷÀ ಅಪ್ಪಾರಾವ ಅಕ್ಕೋಣಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ವಿ.ಜಿ.ಮಹಿಳಾ ಕಾಲೇಜು ಪ್ರಾಚಾರ್ಯ ರಾಜೇಂದ್ರ ಕೊಂಡಾ ಇತರರಿದ್ದರು.