ಜಿಲ್ಲೆ

ಬಹುತೇಕ ಸಮಸ್ಯೆಗಳಿಗೆ ಪರಿಹಾರ

ರಿಪ್ಪನ್‌ಪೇಟೆ: ಕಲುಷಿತ ವಾತಾವರಣದಲ್ಲಿ ದೈನಂದಿನ ಒತ್ತಡಯುಕ್ತ ಮನುಷ್ಯರಿಗೆ ಯೋಗ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ವಿರೂಪಾಕ್ಷಪ್ಪ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಶ್ವ ಯೋಗ ದಿನದ ಅಂಗವಾಗಿ ಶನಿವಾರ ಆಯೋಜಿಸಿದ್ದ ಯೋಗಶಿಬಿರದಲ್ಲಿ ಮಾತನಾಡಿ, ಅನಾದಿಕಾಲದಿಂದಲೂ ಋಷಿ ಮುನಿಗಳಿಂದ ಪರಿಚಿತವಾದ ಯೋಗದ ಬಗ್ಗೆ ಇತ್ತೀಚಿನ ತಲೆಮಾರು ಹೆಚ್ಚೇನೂ ಆಸಕ್ತಿ ವಹಿಸಿರಲಿಲ್ಲ. ಪರಿಣಾಮ ದೈಹಿಕ ಅನಾರೋಗ್ಯ, ಮಾನಸಿಕ ಅಸಮರ್ಥತೆಗೆ ಕಾರಣವಾಗಿತ್ತು. ಪರಿಹಾರ ಹುಡುಕಿ ಆಸ್ಪತ್ರೆಗೆ ಅಲೆಯುತ್ತ, ಅಕವಾದ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ನಮ್ಮೆಲ್ಲ ಸಮಸ್ಯೆಗಳಿಗೆ ಯೋಗದಲ್ಲಿ ಪರಿಹಾರವಿದೆ. ಸೂಕ್ತ ಗುರುಗಳಿಂದ ಅರಿತುಕೊಂಡು ಪ್ರತಿ ನಿತ್ಯ ನಿಗದಿತ ಸಮಯದಲ್ಲಿ ಯೋಗ ಮಾಡುವುದರಿಂದ ಬಹುತೇಕ ಸಮಸ್ಯೆಗಳಿಗೆ ಪರಿಹಾರವಿದೆ ಎಂದರು.ಪಟ್ಟಣದ ಶ್ರೀರಾಮಮಂದಿರದಲ್ಲಿ ಸಾರ್ವಜನಿಕರಿಂದ ಯೋಗ ಶಿಬಿರ ನಡೆಯಿತು.