ಬಾಗಲಕೋಟೆ: ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಅಧ್ಯಕ್ಷತೆಯಲ್ಲಿ ನಡೆಯುವ ತ್ರೆÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯನ್ನು ದಿಢೀರನೇ ಜ.೨೨ಕ್ಕೆ ಎಂದು ನಿಗದಿ ಪಡಿಸಿದ್ದಕ್ಕೆ ಜಿಲ್ಲೆಯ ಕೆಲ ಜನಪ್ರತಿನಿಽಗಳು ತಮಗೆ ಮಾಹಿತಿ ಇಲ್ಲ ಎಂದು ಆಡಳಿತ ಮತ್ತು ವಿಪಕ್ಷದ ಬಹುತೇಕ ಶಾಸಕರು ಅಸಮಧಾನಗೊಂಡು ಸಭೆಗೆ ಗೈರು ಉಳಿದಿ ಪರಿಣಾಮ ಬುಧವಾರ ನಡೆಯಬೇಕಿದ್ದ ಕೆಡಿಪಿ ಸಭೆಯಲ್ಲಿ ಜ.೨೯ಕ್ಕೆ ಸಚಿವರು ಮುಂದೂಡಿದ್ದಾರೆ.
ಬಾಗಲಕೋಟೆ ಜಿಪಂ ಸಭಾಭವನದಲ್ಲಿ ಬುಧವಾರ ಮಧ್ಯಾಹ್ನ ೩ ಗಂಟೆಯ ಬಳಿಕ ಕೆಡಿಪಿ ಸಭೆ ಆರಂಭಗೊAಡಾಗ ಸಚಿವ ಆರ್.ಬಿ.ತಿಮ್ಮಾಪುರ, ಸಂಸದ ಪಿ.ಸಿ.ಗದ್ದಿಗೌಡರ, ಬೀಳಗಿ ಶಾಸಕ ಜೆ.ಟಿ.ಪಾಟೀಲ, ಬಾದಾಮಿ ಶಾಸಕ ಭೀಮಸೇನ ಚಿಮ್ಮನಕಟ್ಟಿ ಮಾತ್ರ ಹಾಜರಿದ್ದರು. ಉಳಿದಂತೆ ಕಾಂಗ್ರೆಸ್, ಬಿಜೆಪಿ ಶಾಸಕರು, ಪರಿಷತ್ ಸದಸ್ಯರು, ರಾಜ್ಯಸಭಾ ಸದಸ್ಯರು ಗೈರು ಉಳಿದಿದ್ದರು.
ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ ಕೆಡಿಪಿ ಆರಂಭಕ್ಕೂ ಮುನ್ನ ಸಚಿವ ಕೆ.ಜೆ.ಜಾರ್ಜ್ ಅವರು ಪಕ್ಷದ ಕಚೇರಿಗೆ ಭೇಟಿ ನೀಡಿದಾಗ ಅಲ್ಲಿ ಹಾಜರಿದ್ದರು. ಜೊತೆಗೆ ಜಾರ್ಜ್ ಅವರು ಇಲಾಖೆ ಅಽಕಾರಿಗಳ ಜೊತೆ ನಡೆಸಿದ ಸಭೆಗೆ ಆಗಮಿಸಿ, ಸಚಿವರಿಗೆ ತಮ್ಮ ಕ್ಷೇತ್ರದ ಬಗ್ಗೆ ಮನವಿ ಕೊಟ್ಟು ಅಲ್ಲಿಂದ ಹೊರನಡೆದರು.
ಈ ವೇಳೆ ಸುದ್ದಿಗಾರರು ಕೆಡಿಪಿ ಸಭೆಗೆ ಬರುವುದಿಲ್ಲವೇ ಎಂದಾಗ, ನಾನು ಭಾಗವಹಿಸಲ್ಲ. ನನಗೆ ಮಂಗಳವಾರ ೪.೩೦ಕ್ಕೆ ಸಿಪಿಒ ಅವರು ಸಭೆ ಇರುವ ಬಗ್ಗೆ ಹೇಳಿದರು. ರಾತ್ರಿ ೮.೩೦ಕ್ಕೆ ಜಿಪಂ ಸಿಇಒ ಅವರು -ÉÇÃನ್ ಮಾಡಿ ಹೇಳಿದರು. ಆಗಲೇ ಅವರಿಗೆ ನಾನು ಸಭೆಗೆ ಬರಲ್ಲ ಎಂದು ತಿಳಿಸಿದ್ದೆ. ನನಗೆ ಪೂರ್ವನಿಗದಿತ ಕಾರ್ಯಕ್ರಮಗಳು ಇವೆ. ಆದರೆ, ಕೆಡಿಪಿ ಸಭೆ ಇರುವ ಬಗ್ಗೆ ನಾಲೈದು ದಿನಗಳ ಮುಂಚೆಯಾದರೂ ಶಾಸಕರಿಗೆ ಮಾಹಿತಿ ನೀಡುವುದು ಒಳ್ಳೆಯದು ಎಂದು ಹೇಳಿದರು.
ಇದೇ ವೇಳೆ ಕೆಲವರು ಶಾಸಕರ ಮನವೊಲಿಸಲು ಮುಂದಾದರಾದರೂ ಅದಕ್ಕೆ ಅವರು ಒಪ್ಪದೇ ಸಭೆಗೆ ತ್ಯಾಗ ಮಾಡುತ್ತೇನೆ ಎಂದು ಹೇಳಿ ಹೋದರು. ಈ ಮಧ್ಯ ಜಿಲ್ಲಾ ಅಧ್ಯಕ್ಷರ ಸಹಾಯಕರೊಬ್ಬರು ಯಾವುದೇ ವಿಚಾರವಾಗಿ ನಿಮ್ಮ ಪಟ್ಟಿ ಕೊಡಿ ಎಂದಾಗಲೂ ಅಲ್ಲೆ ಮುಧೋಳದವರನ್ನೆ ಕೇಳಿ. ಇದೆಲ್ಲ ಪಕ್ಷದ ಅಧ್ಯಕ್ಷರು ಮಾಡಬೇಕು ಎಂದು ಗರಂ ಆಗಿಯೇ ಹೇಳಿ ಅಲ್ಲಿಂದ ನಿರ್ಗಮಿಸಿದರು.
ಕೆಡಿಪಿ ಪ್ರಗತಿ ಪರಿಶೀಲನೆ ಸಭೆಗೆ ಬಾಗಲಕೋಟೆ ಶಾಸಕ ಎಚ್.ವೈ.ಮೇಟಿ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ, ತೇರದಾಳ ಶಾಸಕ ಸಿದ್ದು ಸವದಿ, ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ಪರಿಷತ್ ಸದಸ್ಯರಾದ ಹನಮಂತ ನಿರಾಣಿ, ಪಿ.ಎಚ್.ಪೂಜಾರ, ಪ್ರಕಾಶ ಹುಕ್ಕೇರಿ, ಸುನೀಲಗೌಡ ಪಾಟೀಲ ಗೈರು ಉಳಿದಿದ್ದರು. ಇದರಿಂದ ಸಚಿವರು ಬುಧವಾರದ ಕೆಡಿಪಿ ಸಭೆಯನ್ನು ಜ. ೨೯ಕ್ಕೆ ಮುಂದೂಡಿ, ಹಿಂದಿನ ಕೆಡಿಪಿ ಸಭೆಯ ಅನುಸರಣಾ ವರದಿ ಬಗ್ಗೆ ಮಾತ್ರ ಚರ್ಚೆ ನಡೆಸಿದರು.
ವಿಜಯವಾಣಿಯಲ್ಲಿ ವರದಿ ಪ್ರಕಟ:
ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆಯುವ ತ್ರೆÊಮಾಸಿಕ ಕೆಡಿಪಿ ಪ್ರಗತಿ ಪರಿಶೀಲನೆ ಸಭೆಯನ್ನು ದಿಢೀರನೇ ಕರೆದಿದ್ದು, ಈ ಬಗ್ಗೆ ಶಾಸಕರಿಗೆ ಸರಿಯಾದ ಮಾಹಿತಿ ಇಲ್ಲವಾಗಿದೆ. ಇದರಿಂದ ಸಭೆಗೆ ಆಡಳಿತ ಮತ್ತು ವಿಪಕ್ಷದ ಶಾಸಕರು ಹೆಚ್ಚಾಗಿ ಗೈರು ಉಳಿಯುವ ಮೂಲಕ ತಮ್ಮ ಅಸಮಧಾನ ಹೊರಹಾಕಲಿದ್ದಾರೆ ಎಂದು ವಿಜಯವಾಣಿ ಪತ್ರಿಕೆಯಲ್ಲಿ ಜ. ೨೨ ರಂದು ೬ ತಿಂಗಳ ಬಳಿಕ ಕೆಡಿಪಿ ಸಭೆ ಫಿಕ್ಸ್ ಎನ್ನುವ ಶಿರ್ಷಿಕೆ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು. ಅದರಂತೆ ಹೆಚ್ಚಿನ ಜನಪ್ರತಿನಿಽಗಳು ಗೈರು ಉಳಿದಿದ್ದನ್ನು ಇಲ್ಲಿ ಸ್ಮರಿಸಬಹುದು.