ಕಲಬುರಗಿ: ಭಾರತೀಯ ಪರಂಪರೆಯಲ್ಲಿ ಪ್ರತಿಯೊಂದು ಹಬ್ಬ ವಿಶೇಷ ಅರ್ಥಗಳೊಂದಿಗೆ ಆಚರಿಸುತ್ತ ಬರಲಾಗಿದೆ. ಬಹಿರಂಗದ ವಿಜಯಕ್ಕಿಂತ ಅಂತರAಗದ ವಿಜಯವೇ ನಿಜವಾದ ವಿಜಯದಶಮಿ ಎಂದು ಶಿವಮೊಗ್ಗ ಜಿ¯್ಲೆ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠಾಧ್ಯಕ್ಷ ಶ್ರೀ ಅಮರೇಶ್ವರ ಶಿವಾಚಾರ್ಯರು ನುಡಿದರು.
ನಗರ ಹೊರವಲಯದ ಸಮಾಧಾನ ಆಶ್ರಮದಲ್ಲಿ ಮೌನಯೋಗಿ ಶ್ರೀ ಜಡೆಯ ಶಾಂತಲಿಂಗೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶ್ರೀ ಗುರುದೇವ ಸೇವಾ ಸಂಸ್ಥೆ ಮಂಗಳವಾರ ಆಯೋಜಿಸಿದ್ದ ಗುರುಸೇವಾ ಮಾಸಾಚರಣೆ ಸಮಾರೋಪ, ಸಮಾಧಾನ ನಿಸರ್ಗೋಪಚಾರ ಮತ್ತು ಯೋಗ ಸಾಧನಾ ಕೇಂದ್ರ ಉದ್ಘಾಟನೆ ಹಾಗೂ ವಿಜಯದಶಮಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಧೀರರು, ಶೂರರು, ವೀರರು ಯಾರು ಎಂದರೆ ಕಟ್ಟು ಮಸ್ತಾಗಿ ದೇಹ ಬೆಳೆಸಿಕೊಂಡವರು ಅಥವಾ ನಾಲ್ಕು ಜನರನ್ನು ಏಕಕಾಲಕ್ಕೆ ಹೊಡೆದು ಹಾಕುವವರು ಅಲ್ಲ ಎಂದು ಶಾಸ್ತçಗಳು ಹೇಳುತ್ತವೆ. ಭಕ್ತ ತನ್ನ ಕಷ್ಟ ನಿವಾರಣೆಗಾಗಿ ಎಲ್ಲೆಡೆ ತಿರುಗುವುದಕ್ಕಿಂತ ಇಷ್ಟಲಿಂಗದ ಅನುಸಂಧಾನ ಮಾಡಿದರೆ ಕಷ್ಟ ಪರಿಹಾರವಾಗಲಿದೆ. ಇಷ್ಟಲಿಂಗದಲ್ಲಿ ಅಂಥ ಶಕ್ತಿ ಇದೆ. ಇದು ಗುರುಸೇವಾ ಮಾಸಾಚರಣೆ ಉದ್ದೇಶ. ಈ ಮಾರ್ಗ ಹಾಕಿಕೊಟ್ಟವರು ಮೌನ ತಪಸ್ವಿ ಜಡೆಯ ಶಾಂತಲಿಂಗೇಶ್ವರ ಮಹಾಗುರುಗಳು ಎಂದರು.
ಸಮಾಧಾನ ಪರಿಸರ ನಿಮಗಾಗಿ. ನಿಮ್ಮ ಮನಸ್ಸಿನ ಶಾಂತಿಗಾಗಿ. ಇಲ್ಲಿ ಎಲ್ಲರಿಗೂ ಅವಕಾಶವಿದೆ. ಎಲ್ಲರೂ ಪುರಾತನ ಸಂಸ್ಕಾರ ಶಿಬಿರದಲ್ಲಿ ಭಾಗವಹಿಸಬೇಕು ಎಂದು ಶ್ರೀಗಳು ಕರೆ ನೀಡಿದರು. ಗೋದುತಾಯಿ ಮಹಿಳಾ ಕಾಲೇಜಿನ ನಿವೃತ್ತ ಪಾಂಶುಪಾಲ ನಿಂಗಮ್ಮ ಪತಂಗೆ ಪ್ರಾಸ್ತಾವಿಕ ಮಾತನಾಡಿದರು. ಮಹಾಂತೇಶ ಹಿರೇಮಠ, ಶಿವಶಂಕರ ಇಟಗಿ, ನಿಸರ್ಗ ಚಿಕಿತ್ಸಕ ನಿತ್ಯಾನಂದ ನುಡಿಸೇವೆ ಸಲ್ಲಿಸಿದರು. ಅಣ್ಣಾರಾಯ ಪಾಟೀಲ್ ಬೊಮ್ಮನಹಳ್ಳಿ ನಿರೂಪಣೆ ಮಾಡಿದರು. ಮೌನ ತಪಸ್ವಿಗಳಿಗೆ ನಾಣ್ಯದ ತುಲಾಭಾರ ಸೇವೆ ಸಲ್ಲಿಸಲಾಯಿತು. ಮೌನಯೋಗಿ ಶ್ರೀ ಜಡೆಯ ಶಾಂತಲಿAಗೇಶ್ವರ ಮಹಾಸ್ವಾಮೀಜಿ ನೇತೃತ್ವದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಿತು.