ಜಿಲ್ಲೆ

ಬಸ್‌ನಲ್ಲಿ ಚಾಮುಂಡಿಬೆಟ್ಟಕ್ಕೆ ಬಂದ ಕರಂದ್ಲಾಜೆ

reportermys


ಮೈಸೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬುಧವಾರ ನಗರ ಸಾರಿಗೆ ಬಸ್‌ನಲ್ಲಿ ಬೆಟ್ಟಕ್ಕೆ ಭೇಟಿ ಚಾಮುಂಡೇಶ್ವರಿ ದರ್ಶನ ಪಡೆದರು. ಪ್ರತಿ ಅಷಾಢದಲ್ಲೂ ಮೆಟ್ಟಿಲು ಹತ್ತಿ ಬೆಟ್ಟಕ್ಕೆ ಬರುತ್ತಿದ್ದ ಕರಂದ್ಲಾಜೆ ಅವರು ಈ ಬಾರಿ ನಗರ ಸಾರಿಗೆಯಲ್ಲಿ ಬಂದು ದರ್ಶನ ಪಡೆದರು.

ಬಳಿಕ ಮಾತನಾಡಿದ ಅವರು, ಈ ಬಾರಿ ವರ್ಧಂತಿ ವೇಳೆ ಬೆಟ್ಟಕ್ಕೆ ಬರಬೇಕು ಎಂದು ಎಲ್ಲರೂ ಕೇಳಿಕೊಂಡಿದ್ದರು. ಹೀಗಾಗಿ ಇಂದು ಬೆಟ್ಟಕ್ಕೆ ಭೇಟಿ ನೀಡಿ ದರ್ಶನ ಪಡೆದಿದ್ದೇನೆ. ನವರಾತ್ರಿಯಲ್ಲಿ ಮೆಟ್ಟಿಲು ಹತ್ತಿ ದರ್ಶನ ಪಡೆಯುತ್ತೇನೆ ಎಂದರು.

ದಿನಬಳಕೆ ವಸ್ತುಗಳಿಗೆ ಜಿಎಸ್‌ಟಿ ಏರಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಪ್ರಧಾನಿ ನರೇಂದ್ರ ಮೋದಿಯವರು ತಾಯಿ ಹೃದಯದವರು. ಅವರಿಗೆ ಜನರ ಭಾವನೆಗಳು ಅರ್ಥವಾಗುತ್ತವೆ. ಇಂದು ಜಿಎಸ್‌ಟಿ ಸಭೆ ಇದೆ. ಸಭೆಯಲ್ಲಿ ಜಿಟಿಎಸ್ ಇಳಿಕೆ ಸಾಧ್ಯತೆ ಇದೆ. ಜನರ ಭಾವನೆಗೆ ಪ್ರಧಾನ ಮಂತ್ರಿ ಸ್ಪಂದಿಸುತ್ತಾರೆ ಎಂದರು.

ರಾಜ್ಯದಲ್ಲಿ ನೆರೆ ಪ್ರವಾಹ ಕುರಿತು ಪ್ರತಿಕ್ರಿಯಿಸಿ, ರಾಜ್ಯದ ಬೆಳೆ ನಷ್ಟದ ವರದಿ ಇನ್ನೂ ಕೇಂದ್ರದ ಕೈಸೇರಿಲ್ಲ. ನೆರೆ ಪ್ರವಾಹ ಸಂಪೂರ್ಣ ತಗ್ಗಿದ ಮೇಲೆ ಬೆಳೆ ನಷ್ಟ ಎಷ್ಟು ಎಂಬುದು ಗೊತ್ತಾಗಲಿದೆ. ಪ್ರವಾಹ ತಗ್ಗುವವರೆಗೂ ಬೆಳೆ ನಷ್ಟದ ಅಂದಾಜು ಕಷ್ಟ.