ಹಾಸನ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನ ಬೆಲ್ಟ್ ಕತ್ತರಿಸಿ ಅದರಲ್ಲಿದ್ದ 9.50ಲಕ್ಷ ಬೆಲೆ ಬಾಳುವ ಚಿನ್ನಾಭರಣಗಳ ಕಳವು ಮಾಡಿರುವ ಘಟನೆ ಗುರುವಾರ ಚನ್ನರಾಯಪಟ್ಟಣದಲ್ಲಿ ನಡೆದಿದೆ.
ತಾಲೂಕಿನ ಹಿರಿಸಾವೆ ಹೋಬಳಿ ಕರಿಕ್ಯಾತನಹಳ್ಳಿ ಗ್ರಾಮದ ಅರ್ಪಿತಾ ಎಂಬುವವರು 100 ಗ್ರಾಂ ತೂಕದ ನೆಕ್ಲೇಸ್, 60 ಗ್ರಾಂ ತೂಕದ ಬಳೆಗಳು, 20 ಗ್ರಾಂ ತೂಕದ ಬ್ರಾಸ್ಲೆಟ್, 10 ಗ್ರಾಂ ತೂಕದ ಓಲೆ, ಇವುಗಳನ್ನು ಸಮಾರಂಭದ ಪ್ರಯುಕ್ತ ಅಕೆಯ ಸ್ನೇಹಿತೆ ಮಧು ಅವರಿಗೆ ಒಂದು ತಿಂಗಳಿನ ಹಿಂದೆ ನೀಡಿದ್ದರು. ಆ.10ರಂದು ಹಾಸನದ ನಗರ ಬಸ್ ನಿಲ್ದಾಣಹತ್ತಿರವಿರುವ ಆಟೋ ನಿಲ್ದಾಣದಲ್ಲಿ ವಾಪಾಸ್ ಪಡೆದುಕೊಂಡು, ನಂತರ ಹೊಸ ಬಸ್ ನಿಲ್ದಾಣದಿಂದ ಚನ್ನರಾಯಪಟ್ಟಣಕ್ಕೆ ತೆರಳಿದ್ದಾರೆ. ಬಸ್ ನಿಲ್ದಾಣದಲ್ಲಿ ಬಸ್‌ನಿಂದ ಇಳಿಯುವಾಗ ಹೆಚ್ಚು ಜನರಿದ್ದು, ಈ ನಡುವೆ ಖದೀಮರು ಬ್ಯಾಗ್‌ನ ಕುಯ್ದು ಚಿನ್ನಾಭರಣಗಳನ್ನು ಕಳವು ಮಾಡಿಕೊಂಡಿ ಪರಾರಿಯಾಗಿದ್ದಾರೆ. ಒಡವೆಗಳನ್ನು ಹುಡುಕಿಕೊಡುವಂತೆ ಅರ್ಪಿತಾ ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.