ಜಿಲ್ಲೆ

ಬಸ್​ ಹರಿದು ಬೈಕ್​ ಸವಾರ ಸಾವು

ತುಮಕೂರು ಡೆಸ್ಕ್

ತುಮಕೂರು: ವಿಜಯಪುರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್​, ದ್ವಿಚಕ್ರವಾಹನಕ್ಕೆ ಡಿಕ್ಕಿಯಾಗಿ ಬೈಕ್​ ಸವಾರ ಮೃತಪಟ್ಟಿದ್ದಾನೆ. ನಾಗವಲ್ಲಿ ಸಮೀಪದ ರಂಗಾಪುರದ ಮಹಮದ್​ ಸಾಧಿಕ್​(27) ಮೃತ. ಮಂಗಳವಾರ ಮಧ್ಯಾಹ್ನ ತುಮಕೂರಿನಿಂದ ಬೆಂಗಳೂರು ಕಡೆಗೆ ಬೈಕ್​ನಲ್ಲಿ ಹೋಗುತಿದ್ದ ತೆರಳುತ್ತಿದ್ದ ಸಾಧಿಕ್​ಗೆ ನಗರದ ಹೊರವಲಯದ ಪಂಡಿತನಹಳ್ಳಿ ಗೇಟ್​ ಬಳಿ ಬಸ್​ಡಿಕ್ಕಿಯಾಗಿದ್ದು, ಈ ವೇಳೆ ಕೆಳಗೆ ಬಿದ್ದ ಆತನ ಮೇಲೆ ಬಸ್​ ಹರಿದು ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಲಿಸದೆ ಮೃತಪಟ್ಟಿದ್ದಾನೆ. ಪ್ರತಿದಿನ ದ್ವಿಚಕ್ರವಾಹನದಲ್ಲಿಯೇ ಬೆಂಗಳೂರಿಗೆ ಕೆಲಸಕ್ಕೆ ತೆರಳುತ್ತಿದ್ದ ಮಹಮದ್​ ಸಾಧಿಕ್​ ಮಂಗಳವಾರ ಕೂಡ ತುಮಕೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಎನ್ನಲಾಗಿದೆ. ಕ್ಯಾತಸಂದ್ರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತದಲ್ಲಿ ಹಲವರಿಗೆ ಗಾಯ

ಬುಕ್ಕಾಪಟ್ಟಣ: ಶಿರಾ ತಾಲೂಕು ಬುಕ್ಕಾಪಟ್ಟಣ ಹೋಬಳಿಯ ಕಂಬದಹಳ್ಳಿ ಗೇಟ್​ ಬಳಿ ತೆಲಂಗಾಣ ರಾಜ್ಯದ ಹೈದರಾಬಾದ್​ ನಿಂದ ಕರ್ನಾಟಕದ ಪ್ರವಾಸಿ ತಾಣಗಳಿಗೆ ಬಂದಿದ್ದ ಟೆಂಪೋ ಟ್ರಾವೆಲರ್​ ಮಂಗಳವಾರ ಬೆಳಗಿನ ಜಾವ ಅಪಘಾತವಾಗಿದ್ದು, 3 ಜನಕ್ಕೆ ಗಂಭೀರವಾಗಿ ಗಾಯಗಳಾಗಿದ್ದು, 10 ಜನಕ್ಕೆ ಸಣ್ಣಪುಟ್ಟ ಗಾಯಗಳಾಗಿವೆ. ಪ್ರವಾಸ ಮುಗಿಸಿ ವಾಪಸ್​ ಬುಕ್ಕಪಟ್ಟಣ ಹುಳಿಯಾರು ಮಾರ್ಗವಾಗಿ ಹೈದರಾಬಾದ್​ಗೆ ತೆರಳುತ್ತಿರುವಾಗ ಟನೆ ಸಂಭವಿಸಿದೆ. ಸ್ಥಳಕ್ಕೆ ಬುಕ್ಕಾಪಟ್ಟಣ ಪೊಲೀಸ್​ ಠಾಣೆಯ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದ ಟಿಟಿ ವಾಹನ ನೋಡಿಕೊಂಡು ಬೈಕ್​ ಚಾಲನೆ ಮಾಡಿಕೊಂಡು ಬರುತ್ತಿದ್ದ ವ್ಯಕ್ತಿಗೂ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್​ ಸವಾರರ ಕಾಲು ಮುರಿದಿದೆ. ಎಲ್ಲ ಗಾಯಾಳುಗಳನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.