ಚಿಕ್ಕಮಗಳೂರಿನ ಎಐಟಿ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಎಬಿವಿಪಿ ಕಾರ್ಯಕರ್ತರು ಐಡಿಎಸ್‌ಜಿ ಕಾಲೇಜು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. 
ಜಿಲ್ಲೆ

ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ಎಬಿವಿಪಿ ಪ್ರತಿಭಟನೆ

ಚಿಕ್ಕಮಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಸಮಯಕ್ಕೆ ತೆರಳಲು ಕೆಎಸ್‌ಆರ್‌ಟಿ.ಸಿ ಬಸ್ ಸೌಲಭ್ಯ ಒದಗಿಸದಿರುವುದನ್ನು ಖಂಡಿಸಿ ನಗರದ ಎಐಟಿ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ರಾಷ್ಟಿçÃಯ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದರು.

ಈ ವೇಳೆ ಮಾತನಾಡಿದ ಎಬಿವಿಪಿ ಕಾರ್ಯಕರ್ತ ರಾಕೇಶ್, ಜಿಲ್ಲೆಯಲ್ಲೇ ಅತಿಹೆಚ್ಚು ಸಂಖ್ಯೆ ಹೊಂದಿರುವ ಐಡಿಎಸ್‌ಜಿ ಕಾಲೇಜು ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸುವುದು ಸರ್ಕಾರಿ ಹಾಗೂ ಕೆಎಸ್‌ಆರ್‌ಟಿಸಿ ಕರ್ತವ್ಯವಾಗಿದೆ. ಆದರೆ ಸಮಯಕ್ಕೆ ಬಸ್‌ಗಳು ಬಾರದೇ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.

ಜನಸಾಮಾನ್ಯರ ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕೆ ಎಷ್ಟು ಬಸ್‌ಗಳು ಯಾವ ಭಾಗದಲ್ಲಿ ನಿಯೋಜಿಸಬೇಕು ಎಂಬುದು ವಿಭಾಗೀಯ ನಿಯಂತ್ರಾಣಾಧಿಕಾರಿಗೆ ಅರಿವಿಲ್ಲದಂತಿದೆ. ಸಾವಿರಾರು ಸಂಖ್ಯೆಯಲ್ಲಿ ಐಡಿಎಸ್‌ಜಿ ಕಾಲೇಜು ಸೇರ್ಪಡೆಗೊಳ್ಳುವ ಯುವಕ-ಯುವತಿಯರಿಗೆ ಬಸ್ಸಿನ ಸಮಸ್ಯೆಯೇ ದೊಡ್ಡದಾಗಿದೆ ಎಂದು ಅಸಮಾಧನ ವ್ಯಕ್ತಪಡಿಸಿದರು.

ಅನೇಕ ವಿದ್ಯಾರ್ಥಿಗಳ ಕುಟುಂಬವು ಬಡವರ್ಗದ ಕಾರಣ ಹಣಕಾಸು ಸರಿದೂಗಿಸುವ ನಿಟ್ಟಿನಲ್ಲಿ ಬಸ್ ಪಾಸ್ ಮಾಡಿಕೊಂಡಿರುತ್ತಾರೆ. ಕೆಲವೊಮ್ಮೆ ಬಸ್ಸಿಲ್ಲದ ಕಾರಣ ಆಟೋಗಳಲ್ಲಿ ಹೆಚ್ಚಿನ ದರದಲ್ಲಿ ತೆರಳ ಬೇಕಾಗುವ ಸ್ಥಿತಿ ಬಂದೊದಗಿದೆ. ಹೀಗಾಗಿ ಎಬಿವಿಪಿ ಕಾರ್ಯಕರ್ತರು ರಸ್ತೆತಡೆಹಿಡಿದು ಬೃಹತ್ ಪ್ರತಿಭಟನೆ ನಡೆಸಿz್ದೆÃವೆ ಎಂದರು.

ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಕಾನೂನುಬದ್ಧವಾಗಿ ಹೋರಾಟವನ್ನು ಎಬಿವಿಸಿ ರೂಪಿಸುತ್ತಿದೆ. ಈ ನಡುವೆ ಬಸ್ ಚಾಲಕರು ವಿದ್ಯಾರ್ಥಿಗಳನ್ನು ಲೆಕ್ಕಿಸದೆ ದೌರ್ಜನ್ಯವೆಸಗುವುದು ಸರಿಯಲ್ಲ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಬಸ್ ಸಮಸ್ಯೆ ಬಗೆಹರಿಸದಿದ್ದಲ್ಲಿ ಎಐಟಿ ವೃತ್ತ ಹಾಗೂ ಐಡಿಎಸ್‌ಜಿ ಕಾಲೇಜು ಬಂದ್‌ಗೊಳಿಸಿ ಹೋರಾಟ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಪ್ರತಿದಿನ ಬೆಳಗ್ಗೆ ೮.೩೦ ರಿಂದ ಸಂಜೆ ೬ ರವರೆಗೆ ಒಂದೊAದು ಬಸ್‌ಗಳನ್ನು ಬಿಡಬೇಕು. ನಗರ ಸಾರಿಗೆ ಬಸ್‌ಗಳ ಸಂಖ್ಯೆ ಹೆಚ್ಚಿಸಬೇಕು. ಚಿಕ್ಕಮಗ ಳೂರು ವಿಭಾಗದ ಎಲ್ಲಾ ಬಸ್‌ಗಳನ್ನು ಬಿಜಿಎಸ್ ವೃತ್ತದಲ್ಲಿ ನಿಲ್ಲಿಸುವಂತೆ ಆದೇಶಿಸಬೇಕು ಎಂದು ಆಗ್ರಹಿಸಿದರು.

ಬೆಳಿಗ್ಗೆ ಹಾಗೂ ಮಧ್ಯಾಹ್ನದ ವೇಳೆ ಸಮರ್ಪಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ತೊಂದರೆಯಾಗದ ರೀತಿ ಯಲ್ಲಿ ನಗರ ಬಸ್ ನಿಲ್ದಾಣದಿಂದ ದಂಟರಮಕ್ಕಿ, ಬಿಜಿಎಸ್ ವೃತ್ತಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.