ತುಮಕೂರು: ಟೌನ್ಹಾಲ್ ವೃತ್ತದ ಬಳಿ ಗುರುವಾರ ಸಾರಿಗೆ ಬಸ್ ಡಿಕ್ಕಿಯಾಗಿ ಪಾದಚಾರಿ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಜಿಲ್ಲಾ ಆಸ್ಪತ್ರೆ ಡಿ ಗ್ರೂಪ್ ನೌಕರರಾದ ಮಂಜಮ್ಮ (45) ಮೃತ ದುರ್ದೈವಿ. ಕಡೂರು ಡಿಪೋ ಸಾರಿಗೆ ಬಸ್ ತುಮಕೂರು ಸಾರಿಗೆ ನಿಲ್ದಾಣದಿಂದ ಹೊರಟಿದು, ಟೌನ್ಹಾಲ್ ಬಳಿ ಬಲಗಡೆ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ಚಾಲಕನ ಅಜಾಗರೂಕತೆಯಿಂದಾಗಿ ಅಪಘಾತ ಸಂಭವಿಸಿದೆ
ಎನ್ನಲಾಗಿದ್ದು, ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕಿತ್ಸೆ ಲಿಸದೆ ಸವಾರ ಮೃತ
ಕೊರಟಗೆರೆ: ದ್ವಿಚಕ್ರ ವಾಹನಗಳ ಮಧ್ಯ ಸಂಭವಿಸಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಇಬ್ಬರು ಸವಾರರಲ್ಲಿ ಒಬ್ಬ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದಾನೆ.
ಕೊರಟಗೆರೆ ಪಟ್ಟಣದ ನಿವಾಸಿ ರಾಮಕೃಷ್ಣಯ್ಯ (35) ಮೃತ. ಬುಧವಾರ ರಾತ್ರಿ ಪಟ್ಟಣದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ತುಮಕೂರು&ಮಧುಗಿರಿ ಮುಖ್ಯರಸ್ತೆಯಲ್ಲಿ ಎರಡು ಬೈಕ್ಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಎರಡೂ ಬೈಕ್ ಸವಾರರು ಗಂಭೀರ ಗಾಯಗೊಂಡಿದ್ದರು. ಆದರೆ ರಾಮಕೃಷ್ಣಯ್ಯ ಅವರಿಗೆ ಚಿಕಿತ್ಸೆ ಲಿಸಿಲ್ಲ. ಇನ್ನು ಇನ್ನೊಬ್ಬ ಬೈಕ್ ಸವಾರ ವನಿತ್ ಕುಮಾರ್ (32) ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.