ಜಿಲ್ಲೆ

ಬಸ್ ಡಿಕ್ಕಿಯಾಗಿ ಇಬ್ಬರು ಬೈಕ್ ಸವಾರರಿಗೆ ಗಾಯ

ಹನೂರು: ತಾಲೂಕಿನ ಮಲ್ಲಯ್ಯನಪುರದ ಬಳಿ ಶನಿವಾರ ಖಾಸಗಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿ ಇಬ್ಬರ ಸವಾರರು ಗಾಯಗೊಂಡಿದ್ದಾರೆ.

ಪಾಂಡವಪುರದ ಸ್ವರೂಪ್ ಹಾಗೂ ತಮಿಳುನಾಡಿನ ಪೆನ್ನಾಗರಂನ ಮಾದಪ್ಪನ್ ಎಂಬುವರೇ ಗಾಯಗೊಂಡವರು. ಈ ಇಬ್ಬರೂ ಮಧ್ಯಾಹ್ನ ಬೈಕ್‌ನಲ್ಲಿ ಮ.ಬೆಟ್ಟದಿಂದ ಆಗಮಿಸುತ್ತಿದ್ದರು. ಈ ವೇಳೆ ಮಲ್ಲಯ್ಯನಪುರದ ಬಳಿ ಖಾಸಗಿ ಬಸ್ ನಡುವೆ ಡಿಕ್ಕಿ ಸಂಭವಿಸಿದೆ. ಪರಿಣಾಮ ಸ್ವರೂಪ್‌ನ ತಲೆಗೆ ತೀವ್ರ ಪೆಟ್ಟಾಗಿದ್ದರೆ, ಮಾದಪ್ಪನ್‌ಗೆ ತರಚಿದ ಗಾಯವಾಗಿದೆ.

ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಹೈವೇ ಪೊಲೀಸರು ಇಬ್ಬರು ಗಾಯಾಳುಗಳನ್ನು ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.