ಜಿಲ್ಲೆ

ಬಸ್ ಚಾಲಕನನ್ನು ಅವಾಚ್ಯ  ಶಬ್ದಗಳಿಂದ ನಿಂದಿಸಿ ಹಲ್ಲೆ

ಹೊಳೆನರಸೀಪುರ: ಸಾರಿಗೆ ಸಂಸ್ಥೆಯ ಬಸ್ ನಿಲುಗಡೆ ಸಮಯದಲ್ಲಿ  ವ್ಯಕ್ತಿ ಒಬ್ಬ ಮಂಗಳವಾರ 4 ರ ಸಮಯದಲ್ಲಿ  ಬಸ್ ಮುಂದಕ್ಕೆ ಹೋಗಿ ಚಾಲಕನನ್ನು ಅವಾಚ್ಯ  ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.

ಪಟ್ಟಣದ ಹಾಸನ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿರುವ ಕೆಪಿಟಿಸಿಎಲ್ ವಿಭಾಗದ ಮುಂಭಾಗ ಮೈಸೂರು ವಿಭಾಗದ ಘಟಕ 1ರ ಸಾರಿಗೆ ಸಂಸ್ಥೆಯ ಬಸ್ ಧರ್ಮಸ್ಥಳದಿಂದ ಮೈಸೂರು ಮಾರ್ಗವಾಗಿ ತೆರಳುತ್ತಿರುವ ವೇಳೆ ಪ್ರಯಾಣಿಕರನ್ನು ಕೆಪಿಟಿಸಿಎಲ್ ಬಳಿ  ಹತ್ತಿಸಿಕೊಳ್ಳುವ ವೇಳೆ ಕಂಠಪೂರ್ತಿ ಕುಡಿದ ಅಮಲಿನಲ್ಲಿದ್ದ ಅಂಬೇಡ್ಕರ್ ನಗರದ ಆಟೋ ಚಾಲಕನಾಗಿ ಕೆಲಸ ಮಾಡುವ ವ್ಯಕ್ತಿಯೋರ್ವ ದೊಣ್ಣೆಯನ್ನು ಹಿಡಿದು  ಏಕಾಏಕಿ ಚಾಲಕನ ಮೇಲೆ ಎರಗಿದ್ದಾನೆ. ನಡು ರಸ್ತೆಯಲ್ಲೇ ಕಿತ್ತಾಡಿಕೊಂಡಿದ್ದಾರೆ. ಅಷ್ಟರಲ್ಲಿ ಸಮೀಪ ಇದ್ದ ಸಾರ್ವಜನಿಕರು ಗಲಾಟೆಯನ್ನ ತಹಾ ಬದಿಗೆ ತಂದಿದ್ದಾರೆ ಹಲ್ಲಗೆ ಮುಂದಾದ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ. ಆನಂತರ ಪೊಲೀಸರು ಅವನನ್ನ ಹಿಡಿದು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

 KA13F2328 ಸಂಖ್ಯೆಯ ಬಸ್ ಚಾಲಕ ರವಿಚಂದ್ರ ಕುಮಾರ್ ಅವರು  ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಸಮಯದಲ್ಲಿ ರಸ್ತೆ ಬದಿಯಲ್ಲಿದ್ದ ವ್ಯಕ್ತಿ ದೊಣ್ಣೆಯನ್ನು ಹಿಡಿದು ಕೆಟ್ಟ ಪದಗಳಿಂದ ನಿಂದಿಸುತ್ತ ವಾಹನದ ಮೇಲೆ ಬಡಿದ ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಕ್ಕೆ ನಮ್ಮ ಮೇಲೆ ಹಲ್ಲೆ ಮಾಡಿದ ಆತ ಯಾರೆಂಬುದೇ ನಮಗೆ ಗೊತ್ತಿಲ್ಲ ಆದರೂ ಏಕಾಏಕಿ ನಿರ್ವಾಹಕ ಮೋಹನ ಹಾಗೂ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ಕರ್ತವ್ಯದಲ್ಲಿರುವ ನಮ್ಮ ಮೇಲೆ ಸಾರ್ವಜನಿಕರು ಈ ರೀತಿ ನಡೆದುಕೊಂಡರೆ ನಾವು ಕರ್ತವ್ಯ ಮಾಡುವುದಾದರೂ ಹೇಗೆ ನಮ್ಮ ಕುಟುಂಬಗಳಿಗೆ ಜವಾಬ್ದಾರರು ಯಾರಾಗ್ತಾರೆ ನಮ್ಮ ಪ್ರಾಣಕ್ಕೆ ರಕ್ಷಣೆ ಇಲ್ವೇ ಎಂಬುದು ನಮಗೆ ನೋವಾಗುತ್ತದೆ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದಾರೆ. 

 ಗಲಾಟೆ ಮಾಡುತ್ತಿದ್ದ ವ್ಯಕ್ತಿತನ್ನ ಹೆಂಡತಿ ಬಿಡಿಸಿಕೊಳ್ಳಲು ಬಂದ ಆಕೆಯ ಮೇಲೆಯೂ ಸಹ ಮನಬಂದಂತೆ ಹಲ್ಲೆ ಮಾಡಿ ಪೊಲೀಸರ ಅತಿಥಿಯಾಗಿದ್ದಾನೆ. ಚಾಲಕ ಹಾಗೂ ನಿರ್ವಾಹಕ ಇಬ್ಬರಿಗೂ ಗಾಯಗಳಾಗಿದ್ದು ಸಾರ್ವಜನಿಕ ಆಸ್ಪತ್ರೆಯಲ್ಲಿ  ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಎಲ್ಸಿ ಮಾಡಿಸಿ ಪ್ರಥಮ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆಗೆ ಕಾರಣನಾದ ವ್ಯಕ್ತಿ ಮೇಲೆ ಪೊಲೀಸರು  ಕ್ರಮಕ್ಕೆ ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.